ಅಯೋಧ್ಯೆ : ಈ ವರ್ಷದ ಅಂತ್ಯದೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಅದರ ಭಾಗವಾಗಿ ಪ್ರಭು ಶ್ರೀರಾಮನ ಮೂರ್ತಿ ತಯಾರಿಕೆಗೆ ಪುರಾತನ ಬಂಡೆಕಲ್ಲುಗಳನ್ನ ಬಳಸಲಿದ್ದಾರೆ. ಹಾಗಿದ್ರೆ, ಅದ್ರಲ್ಲೇನು ವೈಶಿಷ್ಟ್ಯ.? ಮುಂದೆ ಓದಿ.
ಉತ್ತರದಲ್ಲಿರುವ ಅಯೋಧ್ಯೆಯನ್ನ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಿದ್ದು, ಶ್ರೀರಾಮ ಮಂದಿರದ ನಿರ್ಮಾಣದ ಪ್ರತಿಯೊಂದು ಅಂಶವನ್ನ ಎಚ್ಚರಿಕೆಯಿಂದ ಪರಿಗಣಿಸುತ್ತಿದೆ. ಅದ್ರಂತೆ, ಈ ಕ್ರಮದಲ್ಲಿ ಶ್ರೀರಾಮನ ಮೂರ್ತಿ ತಯಾರಿಕೆಗೂ ಅಷ್ಟೇ ಕಾಳಜಿ ವಹಿಸಲಾಗುತ್ತಿದೆ.
ರಾಮಮಂದಿರ ನಿರ್ಮಾಣವಾಗುತ್ತಿರುವಂತೆಯೇ… ರಾಮ ಜನ್ಮಭೂಮಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಿರುವ ರಾಮನ ವಿಗ್ರಹವೂ ಅಷ್ಟೇ ಸುಂದರವಾಗಿರಲಿದೆ. ಈ ಪ್ರತಿಮೆಯನ್ನ ತಯಾರಿಸಲು ಎರಡು ವಿಶೇಷ ಅಪರೂಪದ ಬಂಡೆಕಲ್ಲುಗಳನ್ನ ಆಯ್ಕೆ ಮಾಡಲಾಗಿದೆ. ಈ ಬಂಡೆಗಳು ಈ ಗುರುವಾರದೊಳಗೆ (02 ಫೆಬ್ರವರಿ 2023) ಅಯೋಧ್ಯೆಯನ್ನ ತಲುಪಲಿವೆ.
ಅಂದ್ಹಾಗೆ, ಈ ಬಂಡೆಕಲ್ಲುಗಳು ಸಾಮಾನ್ಯ ಕಲ್ಲುಗಳಲ್ಲ. ಇವುಗಳಿಗೆ ಪುರಾತನ ಇತಿಹಾಸವಿದ್ದು, ಆರು ಮಿಲಿಯನ್ ವರ್ಷಗಳಷ್ಟು ಹಳೆಯದಾಗಿವೆ. ಅವು ನೇಪಾಳದ ಗಂಡಕಿ ನದಿಯ ದಡದಲ್ಲಿ ಕಂಡು ಬರುತ್ತವೆ. ಇಂತಹ ಕಲ್ಲುಗಳಿಂದ ಫ್ರಭು ಶ್ರೀರಾಮನ ವಿಗ್ರಹವನ್ನ ನಿರ್ಮಿಸುವುದೇ ದೊಡ್ಡ ಸೌಭಾಗ್ಯ. ಅಂದ್ಹಾಗೆ, ಅಯೋಧ್ಯೆಯಲ್ಲಿ ಪ್ರಭು ರಾಮ, ಬಾಲ ರಾಮನಾಗಿ ಕಾಣಿಸಿಕೊಳ್ಳುತ್ತಾನೆ.
ತಿರುಮಲದಲ್ಲಿರುವ ವೆಂಕಟೇಶ್ವರನ ಮೂಲ ವಿಗ್ರಹ ಕೂಡ ಗಂಡಕಿ ನದಿಯ ಬಂಡೆ ಎಂದು ಹೇಳಲಾಗುತ್ತದೆ. ಅದ್ರಂತೆ, ತಿರುಪತಿ ತಿಮ್ಮಪ್ಪ ತಿರುಮಲಕ್ಕೆ ಹೇಗೆ ಬಂದರು ಎಂಬುದಕ್ಕೆ ಹಲವು ದಂತಕಥೆಗಳಿವೆ. ಸಧ್ಯ ಅಯೋಧ್ಯೆ ಬಾಲ ರಾಮನ ನಿರ್ಮಾಣಕ್ಕೆ ಅದೇ ಬಂಡೆಗಳನ್ನುಆರಿಸಿಕೊಳ್ಳಲಾಗಿದೆ.
ಆ ಎರಡು ಬಂಡೆಗಳಲ್ಲಿ ಒಂದು 14 ಟನ್ ತೂಕವಿದ್ದು, ಇನ್ನೊಂದು ತೂಕ 26 ಟನ್ ತೂಕವಿದೆ. ಅವು 7 ಅಡಿ ಎತ್ತರವಿದ್ದು, ಈ ಶುಕ್ರವಾರ ಬಂಡೆಗಳು ಎರಡು ಲಾರಿಗಳಲ್ಲಿ ನೇಪಾಳದಿಂದ ಹೊರಟಿವೆ. ಅವುಗಳಿಗೆ ಯಾವುದೇ ಹಾನಿಯಾಗದಂತೆ ಎಲ್ಲ ಕಾಳಜಿ ವಹಿಸಲಾಗಿದ್ದು, ಅದಕ್ಕಾಗಿಯೇ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಇದುವರೆಗೆ ಅಯೋಧ್ಯೆ ವಿಮಾನ ನಿಲ್ದಾಣ ಯೋಜನೆಯು ಜೂನ್ 2023 ರೊಳಗೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಿದೆ. ಈ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ಮೌಲ್ಯ 242 ಕೋಟಿ ರೂಪಾಯಿ ಆಗಿದ್ದು, ಟರ್ಮಿನಲ್ ಕಟ್ಟಡದ ನಿರ್ಮಾಣ ಮತ್ತು ಏರ್ಸೈಡ್ ಸೌಲಭ್ಯಗಳ ಅಭಿವೃದ್ಧಿ ಇದರಲ್ಲಿ ನಿರ್ಣಾಯಕವಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರತಿ ಹೆಜ್ಜೆಯಲ್ಲೂ ಆಧ್ಯಾತ್ಮಿಕ ಭಾವನೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 2023ರ ವೇಳೆಗೆ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ. ವಿಮಾನ ನಿಲ್ದಾಣವು ರಾಮಮಂದಿರದಿಂದ 7 ಕಿಲೋಮೀಟರ್ ದೂರದಲ್ಲಿದೆ. ಭಕ್ತರು ವಿಮಾನ ನಿಲ್ದಾಣದಿಂದ ನೇರವಾಗಿ ರಾಮಜನ್ಮಭೂಮಿಗೆ ಬರಲು ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಾಗಿ ಬಹುಬೇಗ ಭಗವಂತನ ದರ್ಶನ ಸಾಧ್ಯವಾಗಲಿದೆ. ಇದರ ಮೂಲಕ ಪ್ರತಿ ವರ್ಷ 6 ಲಕ್ಷ ಪ್ರಯಾಣಿಕರು ಪ್ರಯಾಣಿಸಬಹುದು.