ಇಸ್ರೋ ಮತ್ತೊಂದು ಮಹತ್ವದ ಸಾಧನೆ ; ಬಾಹ್ಯಾಕಾಶದಲ್ಲಿ ‘ಸಸ್ಯ’ಗಳ ಬೆಳವಣಿಗೆ, ಮೊಳಕೆಯೊಡೆದ ‘ಅಲಸಂದೆ’

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ದೊಡ್ಡ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿ ಅಲಸಂದೆ ಬೀಜಗಳನ್ನ ಮೊಳಕೆಯೊಡೆಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಶೀಘ್ರದಲ್ಲೇ ಮೊಳಕೆಯಿಂದ ಮುಂದುವರೆದು ಎಲೆಗಳು ಸಹ ಹೊರಬರುತ್ತವೆ ಎಂದು ವಿಜ್ಞಾನಿಗಳು ಆಶಿಸಿದ್ದಾರೆ. ಇದರೊಂದಿಗೆ, ಕಡಿಮೆ ಗುರುತ್ವಾಕರ್ಷಣೆಯಲ್ಲಿ ಸಸ್ಯಗಳ ಬೆಳವಣಿಗೆಯನ್ನ ಅಧ್ಯಯನ ಮಾಡುವ ನಿಟ್ಟಿನಲ್ಲಿ ಇಸ್ರೋ ಪ್ರಮುಖ ಹೆಜ್ಜೆ ಇಟ್ಟಿದೆ. ಈ ಪ್ರಯೋಗವು ಬಾಹ್ಯಾಕಾಶದಲ್ಲಿ ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನ ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ, ಇದು ದೀರ್ಘ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಸಾಕಷ್ಟು ಸಹಾಯ … Continue reading ಇಸ್ರೋ ಮತ್ತೊಂದು ಮಹತ್ವದ ಸಾಧನೆ ; ಬಾಹ್ಯಾಕಾಶದಲ್ಲಿ ‘ಸಸ್ಯ’ಗಳ ಬೆಳವಣಿಗೆ, ಮೊಳಕೆಯೊಡೆದ ‘ಅಲಸಂದೆ’