ಟಿಬೆಟ್ : ಗಡಿಯಲ್ಲಿ ಚೀನಾ ಮತ್ತೊಮ್ಮೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಭಾರತ-ನೇಪಾಳ ಗಡಿಯ ಬಳಿ ಗಂಗಾನದಿಯ ಉಪನದಿಯಲ್ಲಿ ಟಿಬೆಟ್ನಲ್ಲಿ ಚೀನಾ ಹೊಸ ಅಣೆಕಟ್ಟು ನಿರ್ಮಿಸುತ್ತಿದೆ ಎಂದು ಹೊಸ ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ. ಇತ್ತೀಚೆಗೆ ಮತ್ತೊಂದು ಉಪಗ್ರಹ ಚಿತ್ರ ಹೊರಬಿದ್ದಿದ್ದು, LACಯ ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಮಿಲಿಟರಿ, ಮೂಲಸೌಕರ್ಯ ಮತ್ತು ಹಳ್ಳಿಗಳ ನಿರ್ಮಾಣದಲ್ಲಿ ಚೀನಾ ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಈ ಚಿತ್ರ ತೋರಿಸುತ್ತದೆ. ಇಂಟೆಲ್ ಲ್ಯಾಬ್ಸ್ನ ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಸಂಶೋಧಕ ಡಾಮಿಯನ್ ಸೈಮನ್ ಗುರುವಾರ ಟ್ವಿಟರ್ನಲ್ಲಿ ಚಿತ್ರಗಳನ್ನ ಹಂಚಿಕೊಂಡಿದ್ದಾರೆ.
ಮೇ 2021 ರಿಂದ ಚೀನಾ ಮೂಲಸೌಕರ್ಯವನ್ನ ಅಭಿವೃದ್ಧಿಪಡಿಸಿದ್ದು, ಟಿಬೆಟ್ನ ಬುರಾಂಗ್ ಕೌಂಟಿಯಲ್ಲಿ ಮಾಬ್ಜಾ ಜೊಂಗ್ಬೋ ನದಿಯ ಮೇಲೆ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ. ಭಾರತ ಮತ್ತು ನೇಪಾಳದೊಂದಿಗಿನ ಚೀನಾದ ಗಡಿ ತ್ರಿಕೋನದಿಂದ ಉತ್ತರಕ್ಕೆ ಕೆಲವು ಕಿಲೋಮೀಟರ್ ದೂರದಲ್ಲಿ ಅಣೆಕಟ್ಟು ಇದೆ ಎಂದು ಸಂಶೋಧಕ ಡಾಮಿಯನ್ ಸೈಮನ್ ಹೇಳಿದ್ದಾರೆ.
ಹೊಸ ಉಪಗ್ರಹ ಚಿತ್ರಗಳ ಪ್ರಕಾರ, ಅಣೆಕಟ್ಟು 350 ರಿಂದ 400 ಮೀಟರ್ ಉದ್ದವಿದೆ ಎಂದು ತೋರುತ್ತದೆ. ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿರುವುದರಿಂದ ಅದರ ಉದ್ದೇಶದ ಬಗ್ಗೆ ಏನನ್ನೂ ಹೇಳಲಾಗದು ಎಂದರು. ಆದ್ರೆ, ಸಮೀಪದಲ್ಲೇ ವಿಮಾನ ನಿಲ್ದಾಣವನ್ನೂ ನಿರ್ಮಿಸಲಾಗುತ್ತಿದೆ ಎಂದು ಸೈಮನ್ ಹೇಳಿದ್ದಾರೆ.
Health Tips : ನೀವು ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುತ್ತೀರಾ? ಎಷ್ಟು ಅಪಾಯಕಾರಿ ಗೊತ್ತಾ..! ಇಲ್ಲಿದೆ ಓದಿ
ಜೈಲಿನಿಂದ್ಲೇ ಹೊಸ ವಿಡಿಯೋ ಹರಿಬಿಟ್ಟ ಭಯೋತ್ಪಾದಕ ‘ಮಕ್ಕಿ’ ; ‘ಅಲ್ ಖೈದಾ’ ಜೊತೆ ಯಾವುದೇ ಸಂಬಂಧ ಇಲ್ವಂತೆ