ಬೆಂಗಳೂರು: ಋತುಮತಿಯರಿಗೆ ಕೈಗೆಟಕುವ ದರದಲ್ಲಿ ʼಮುಟ್ಟಿನ ಕಪ್‌ʼ ಲಭ್ಯವಿದೆ. ಆನ್‌ಲೈನ್‌ನಲ್ಲಿಯೂ ಸುಲಭವಾಗಿ ದೊರಕುತ್ತದೆ. ಈಗ ಸಿಲಿಕಾನ್‌ ಮತ್ತು ರಬ್ಬರ್‌ನಿಂದ ತಯಾರಿಸಲಾದ ಕಪ್‌ಗಳು ಸಿಗುತ್ತವೆ.ವಯೋಮಾನ, ದೇಹಗಾತ್ರ, ಸ್ರಾವದ ಪ್ರಮಾಣಕ್ಕೆ ಅನುಗುಣವಾದ, ಬೇರೆ ಬೇರೆ ಆಕಾರ, ಗಾತ್ರಗಳ ಮುಟ್ಟಿನ ಕಪ್‌ಗಳೂ ಲಭ್ಯ. ಈಗಷ್ಟೇ ಋತುಮತಿಯಾದವರಿಗೆ, ಇನ್ನೂ ಗರ್ಭ ಧರಿಸದವರಿಗೆ, ಬಾಣಂತನ ಪೂರೈಸಿದವರಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಹೀಗೆ ಅವರವರ ಅಗತ್ಯಕ್ಕೆ ತಕ್ಕಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಮುಟ್ಟಿನ ಕಪ್‌ಗಳೂ ಲಭ್ಯ ಇವೆ. ಅದರಲ್ಲೂ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರವೇ ಉಚಿತವಾಗಿ ಮುಟ್ಟಿನ ಕಪ್‌ಗಳನ್ನು ವಿತರಿಸುತ್ತಿದೆ.  

Interesting Facts : ಥೈರಾಯ್ಡ್ ಇರುವವರು ‘ಅನ್ನ’ ತಿನ್ನಬಾರದೇ.? ತಜ್ಞರು ಏನು ಹೇಳೋದೇನು.?

BREAKING : ದೆಹಲಿಯ 4, ಹರಿಯಾಣದ 1 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ AAP!

‘ಹಿಮಾಲಯದಿಂದ ಬಹಾಮಾಸ್’ವರೆಗೆ’ ಬಾಹ್ಯಾಕಾಶದಿಂದ ತೆಗೆದ ‘ಭೂಮಿಯ ಅದ್ಭುತ ಚಿತ್ರ’ ಹಂಚಿಕೊಂಡ ‘ನಾಸಾ’

ಇನ್ನೂ ದೇಶದಲ್ಲಿ ಇದೇ ಮೊದಲ ಬಾರಿಗೆ ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿವರೆಗೆ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವ 75 ಸಾವಿರ ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ನೀಡಲು 600 ಕಂಪನಿಗಳು ಮುಂದಾಗಿವೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ.
ಇದಲ್ಲದೇ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ʼಯುವನಿಧಿʼ ಅಡಿಯಲ್ಲಿ ಈಗಾಗಲೇ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ಪದವೀಧರರು/ ಸ್ನಾತಕೋತ್ತರ ಪದವೀಧರರು ಮತ್ತು ಡಿಪ್ಲೋಮಾದಾರರು ಅವರ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ.
ಫೆಬ್ರವರಿ 2024ರಲ್ಲಿ ಪ್ರಯೋಜನ ಪಡೆಯಲು ಅಭ್ಯರ್ಥಿಗಳು 29.02.2024ರೊಳಗೆ ತಾನು ನಿರುದ್ಯೋಗಿ ಎಂದು ಕಡ್ಡಾಯವಾಗಿ ಸ್ವಯಂ ಘೋಷಣೆ ಮಾಡಬೇಕು. ಸೂಚಿತ ಸಮಯದೊಳಗೆ ಮಾಸಿಕ ಸ್ವಯಂ ಘೋಷಣೆ ಮಾಡದೇ ಹೋದಲ್ಲಿ ʼಯುವನಿಧಿʼ ನೇರ ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹಗೊಳಿಸಲಾಗುವುದು.

Share.
Exit mobile version