ಹುಬ್ಬಳ್ಳಿ :  ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಈಗ ಹಸಿರು ವಿಮಾನ ನಿಲ್ದಾಣವನ್ನಾಗಿ ಬದಲಿಸಲಾಗಿದೆ. ಈ ಮೂಲಕ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿದೆ ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2030 ರೊಳಗೆ ಶೇಕಡಾ 50 ರಷ್ಟು ಗ್ರೀನ್ ಎನರ್ಜಿಯತ್ತ ದೇಶ ಸಾಗಬೇಕಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಶೇ.100 ರಷ್ಟು ಅಂದರೆ ಸಂಪೂರ್ಣ ಸೌರಶಕ್ತಿಯ ಮೂಲಕ ಕಾರ್ಯನಿರ್ವಹಿಸಲಿದೆ” ಎಂದು ಪ್ರಲ್ಹಾದ್ ಜೋಶಿ ತಮ್ಮ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಸುಮಾರು 8MWp ಸೌರಶಕ್ತಿಯಿಂದ ವಿದ್ಯುತ್ ಶಕ್ತಿ ಉತ್ಪಾದಿಸುವ ಘಟಕದ ಸ್ಥಾಪನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಆರಂಭವಾಗಿದೆ. ಅದರ ಶೇಖರಣೆಯು ಹುಬ್ಬಳ್ಳಿಯಲ್ಲಿಯೇ ಆಗಲಿದೆ. ಶೇಖರಿಸಿದ ವಿದ್ಯುತ್ ಶಕ್ತಿಯನ್ನು ಬೆಳಗಾವಿ, ಮೈಸೂರು, ಬಳ್ಳಾರಿ, ಬೆಂಗಳೂರು ಹಾಗೂ ಇನ್ನಿತರ ವಿಮಾನ ನಿಲ್ದಾಣಗಳಿಗೆ ಸರಬರಾಜು ಮಾಡಲಾಗುವುದು ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.

BIGG NEWS: ಚಳಿಯಿಂದ ನಲುಗುತ್ತಿರುವ ಉತ್ತರ ಕರ್ನಾಟಕ ಮಂದಿ, ಥಂಡಿ ಹವಾದ ಬಗ್ಗೆ ಕೃಷಿ ಹವಾಮಾನ ಎಚ್ಚರಿಕೆ

2030ರ ಒಳಗೆ ದೇಶದ ವಿದ್ಯುತ್ ಶಕ್ತಿಯ ಉತ್ಪಾದನೇ ಕನಿಷ್ಟ 50ರಷ್ಟು ನವೀಕರಿಸಬಹುದಾದ ಇಂಧನಗಳ ಮುಖಾಂತರ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗಾಗಲೇ ಸಂಪೂರ್ಣ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ರಾಜ್ಯದ ಪ್ರಥಮ ವಿಮಾನ ನಿಲ್ದಾಣವಾಗಿದ್ದು ಹೆಮ್ಮೆಯ ವಿಷಯ ಎಂದಿದ್ದಾರೆ.

BIGG NEWS: ಚಳಿಯಿಂದ ನಲುಗುತ್ತಿರುವ ಉತ್ತರ ಕರ್ನಾಟಕ ಮಂದಿ, ಥಂಡಿ ಹವಾದ ಬಗ್ಗೆ ಕೃಷಿ ಹವಾಮಾನ ಎಚ್ಚರಿಕೆ

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿಸುವ ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ಸಹಕರಿಸಿದ ದೇಶದ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ.

Share.
Exit mobile version