ʼಅರ್ನಬ್ ಗೋಸ್ವಾಮಿʼ​ಗೆ ಮತ್ತೊಂದು ಸಂಕಷ್ಟ: ಇದು ʼ200 ಕೋಟಿʼಯ ಕಂಟಕ..! – Kannada News Now


India

ʼಅರ್ನಬ್ ಗೋಸ್ವಾಮಿʼ​ಗೆ ಮತ್ತೊಂದು ಸಂಕಷ್ಟ: ಇದು ʼ200 ಕೋಟಿʼಯ ಕಂಟಕ..!

ಮುಂಬೈ: ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವ್ರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಹಾಗೂ ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಹೌದು, ಇತ್ತಿಚಿಗೆ ಟಿ.ವಿಯ ಟಿಆರ್​ಪಿಯನ್ನ ತಿರುಚಿರುವ ಆರೋಪದಲ್ಲಿ ಸಿಲುಕಿ ಭಾರಿ ಸಂಕಷ್ಟ ಅನುಭವಿಸುತ್ತಿರುವ ಅರ್ನಬ್ ವಿರುದ್ಧ ನಿರ್ಮಾಪಕ ಸಂದೀಪ್ ಸಿಂಗ್ ತಿರುಗಿ ಬಿದ್ದಿದ್ದಾರೆ. 200 ಕೋಟಿ ರೂಪಾಯಿ ಮಾನನಷ್ಟ ನೀಡುವಂತೆ ಲೀಗಲ್​ ನೋಟಿಸ್​ ಜಾರಿಗೊಳಿಸಿದ್ದಾರೆ.

ಇಷ್ಟಕ್ಕೂ ಆರ್ನಾಬ್‌ ವಿರುದ್ಧ ಸಂದೀಪ್ ಮಾಡ್ತಿರುವ ಆರೋಪವಾದ್ರು ಏನು ಅಂದ್ರೆ, “ಸುಶಾಂತ್​ ಸಿಂಗ್‌ ಅವರನ್ನ ಕೊಲೆ ಮಾಡಿದ್ದು ನಾನೇ ಎಂದು ಬಿಂಬಿಸಿ ಟ್ವೀಟ್​ಗಳನ್ನ ಮಾಡುತ್ತಾ, ಸುದ್ದಿ ಅರ್ನಬ್ ಸುದ್ದಿ ಮಾಡ್ತಿದ್ರು. ​ಇದು ಸಾಲದು ಎಂಬಂತೆ ನನ್ನಿಂದ ಹಣ ವಸೂಲಿಗೆ ಮುಂದಾಗಿದ್ದರು. ಈ ಮೂಲಕ ತಮಗೆ ಮಾನಸಿಕವಾಗಿ ಕಿರುಕುಳ ನೀಡಿದ್ದರು” ಎಂದು ಸಂದೀಪ್​ ಸಿಂಗ್​ ದೂರಿದ್ದಾರೆ.

ಅವ್ರ ವಾಹಿನಿಯ ಟಿಆರ್​ಪಿ ಹೆಚ್ಚಿಸುವ ಉದ್ದೇಶದಿಂದ ನನಗೆ ಕಳಂಕ ತರುವ ಯತ್ನ ಮಾಡಿದ್ದಾರೆ ಮತ್ತು ಅರ್ನಬ್ ಅವರ ಸಹೋದ್ಯೋಗಿಗಳು ತಮ್ಮಿಂದ ಹಣ ವಸೂಲಿ ಮಾಡಲು ಮುಂದಾಗಿದ್ದರು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಇನ್ನು
ಈ ನೋಟಿಸ್‍ನಲ್ಲಿ ಅರ್ನಬ್ ಅವರು 15 ದಿನಗಳೊಳಗೆ ರೂ. 200 ಕೋಟಿ ಪರಿಹಾರ ಹಾಗೂ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದೇ ಹೋದರೆ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗುವುದು ಸಂದೀಪ್ ಎಚ್ಚರಿಸಿದ್ದಾರೆ.
error: Content is protected !!