BREAKING: ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಸಾವು

ಬೆಳಗಾವಿ: ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಸಾವನ್ನಪ್ಪಿದೆ. ಇಂದು ಸಂಜೆ ಚಿಕಿತ್ಸೆ ಫಲಿಸದೇ ಮತ್ತೊಂದು ಕೃಷ್ಣಮೃಗ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿ ಬಳಿಯಿರುವಂತ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮತ್ತೊಂದು ಕೃಷ್ಣ ಮೃಗ ಸಾವನ್ನಪ್ಪಿದೆ. ನವೆಂಬರ್.13ರಂದು 8 ಕೃಷ್ಣಮೃಗಗಳು ಮೃತಪಟ್ಟಿದ್ದವು. ನಿನ್ನೆ ಒಂದೇ ದಿನ 20 ಕೃಷ್ಣಮೃಗಗಳು ಮೃತಪಟ್ಟಿದ್ದವು. ನಿನ್ನೆ ತಡರಾತ್ರಿ ಒಂದು, ಇಂದು ಸಂಜೆ ಗಂಡು ಕೃಷ್ಣಮೃಗ ಸಾವನ್ನಪ್ಪಿದೆ. ಚೆನ್ನಮ್ಮ ಕಿರು ಮೃಗಾಲಯದಲ್ಲಿ ಈವರೆಗೆ 30 ಕೃಷ್ಣಮೃಗಗಳು ಸಾವನ್ನಪ್ಪಿದಂತೆ ಆಗಿದೆ. ನಾಳೆ ಸಂಜೆ 5 … Continue reading BREAKING: ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಸಾವು