ಶಿವಮೊಗ್ಗ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರಾವತಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ 4 ಅಂಗನವಾಡಿ ಕಾರ್ಯಕರ್ತೆಯರು ಮತ್ತು 19 ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ.
ಭದ್ರಾವತಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಹಾವುಗೊಲ್ಲರಕ್ಯಾಂಪ್ ಮಿನಿ, ಚಿಕ್ಕಗೊಪ್ಪೆನಹಳ್ಳಿ, ಸಿಂಗನ ಮನೆ-2, ಹೊಸೂರು ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 4 ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
Coronavirus: ಬೆಂಗಳೂರಿನಲ್ಲಿ ಪೊಲೀಸರಿಗೆ 164 ಮಂದಿ ಪೊಲೀಸರಿಗೆ ಕೋವಿಡ್ ಪಾಸಿಟಿವ್
ಅಂಗನವಾಡಿ ಕೇಂದ್ರಗಳಾದ ಸಿದ್ದರಹಳ್ಳಿ(ಪ.ಜಾ), ದೊಣಭಘಟ್ಟ-4, ಸಿಂಗನಮನೆ-2, ಶಾಂತಿನಗರ-1, ನಾಗಸಮುದ್ರ-1, ಸುರಗಿತೋಪು-1, ಮೂಫಾಕಾಂಪೌಂಡ್, ಸೀಗೆಬಾಗಿ-3, ಫಿಲ್ಟರ್ಶೆಡ್, ಸಂಜಯ್ಕಾಲೋನಿ, ಹುತ್ತಾಕಾಲೋನ್, ಅಶೋಕ್‍ನಗರ-2, ಅರದೊಟ್ಟಲು, ಎಂ ಎಂ ಕಾಂಪೌಡ್, ಅರಳೀಹಳ್ಳಿ-1, ನೆಹರುನಗರ, ಸಣ್ಣಕುರುಬರ ಬೀದಿ, ಹಳೇಕೂಡ್ಲಿಗೆರೆ(ಪ.ಜಾತಿ) ಮತ್ತು ವೇಲೂರ್‍ಶೆಡ್-1 ಗಳಲ್ಲಿ 19 ಅಂಗನವಾಡಿ ಸಹಾಯಕಿರಯರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ಫೆ.13 ರೊಳಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಫಲಕ ಹಾಗೂ ಕಚೇರಿಯ ವೇಳೆಯಲ್ಲಿ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಭದ್ರಾವತಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.
BIG NEWS: ‘ಸಚಿವ ವಿ.ಸುನೀಲ್ ಕುಮಾರ್’ ಅವರಿಗೂ ಕೊರೋನಾ ಪಾಸಿಟಿವ್ | Minister V Sunil Kumar
ಸೊರಬ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ
ಸೊರಬ ತಾಲ್ಲೂಕು ಶಿಶು ಅಭಿವೃದ್ದಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಪುರದೂರು, ಚಾಮರಾಜಪೇಟೆ ಮಿನಿ (ವಾ.ನಂ.:5), ಹಿರೇಕಬ್ಬೂರು ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಮತ್ತು ಜೋಗಿಹಳ್ಳಿ, ತಾವರೆಹಳ್ಳಿ, ಕುಳುವಳ್ಳಿ, ಇಂಡುವಳ್ಳಿ, ಬಿ-ಇಂಡುವಳ್ಳಿ, ಚಗಟೂರು, ಮೂಡಿ-1, ಯಲಸಿ-1, ಬನದಕೊಪ್ಪ, ತಲಕಾಲುಕೊಪ್ಪ, ಬಂಗಾರಪ್ಪ ಬಡಾವಣೆ (ವಾ.ನಂ.:2) ಹಾಗೂ ಓಟೂರು ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದವರು ಹಾಗೂ ಸಹಾಯಕಿಯರ ಹುದ್ದೆಗೆ 4ನೇ ತರಗತಿ ಉತ್ತೀರ್ಣರಾದ 18-35 ವರ್ಷ ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ದಿ: 13/02/2022 ರೊಳಗಾಗಿ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗ: ಜ.17ರಿಂದ 24ರವರೆಗೆ ‘ವಾಣಿಜ್ಯ ಪರೀಕ್ಷೆ’ ಹಿನ್ನಲೆಯಲ್ಲಿ, ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸೊರಬ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ದೂ.ಸಂ. 08184-295896 ನ್ನು ಸಂಪರ್ಕಿಸುವುದು.
ಸಾಗರ ತಾಲೂಕಿನ ಅಂಗವನಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನ
ಶಿಶು ಅಭಿವೃದ್ದಿ ಯೋಜನೆ ಸಾಗರ ವ್ಯಾಪ್ತಿಯ ಕೆಳಕಂಡ ಗ್ರಾಮಗಳಿಂದ ಅಂಗನವಾಡಿ ಕಾರ್ಯಕರ್ತೆ/ಮಿನಿ ಕಾರ್ಯಕರ್ತೆ/ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವರ : ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ತಾವರೇಹಳ್ಳಿ, ಬರೂರು, ಕೊಳೆಗೋಡು(ಮಿನಿ), ಕಾನಗೋಡು+ಬೆನವಗೋಡು(ಮಿನಿ), ಮಡಸೂರು, ವಡಂಬೈಲು, ಕಾರೇಹೊಂಡ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಂದಾಸುರ, ಕೆರೆಹಿತ್ಲು, ಲಕ್ಕವಳ್ಳಿ, ಬರೂರು, ದೊಡ್ಡಬ್ಯಾಣ, ಸಂಗಣ್ಣನಕೆರೆ, ನಂದೀತಳೆ, ಅಡೂರು ಇಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
BIGG BREAKING NEWS: ಇನ್ಮುಂದೆ ಜ.23ರಿಂದಲೇ ‘ಗಣರಾಜ್ಯೋತ್ಸವ’ ಸಂಭ್ರಮಾಚರಣೆ ಆರಂಭ | Republic Day Celebrations
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಪಾಸಾದ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕಿಯರ ಹುದ್ದೆಗೆ 4ನೇ ತರಗತಿ ಉತ್ತೀರ್ಣ ಹೊಂದಿದ ಎಸ್‍ಎಸ್‍ಎಲ್‍ಸಿ ಒಳಗಿನ ವಿದ್ಯಾರ್ಹತೆಯುಳ್ಳ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ಫೆ.13 ರೊಳಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಫಲಕ ಹಾಗೂ ಕಚೇರಿಯ ವೇಳೆಯಲ್ಲಿ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ತಾಲ್ಲೂಕು ಶಿಶು ಅಭಿವೃದ್ದಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಸೋಮಿನಕೊಪ್ಪ-1, ಹರಪನಹಳ್ಳಿ ಕ್ಯಾಂಪ್ ಮಿನಿ, ಗುಡ್ಡದ ಅರಕೆರೆ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಮತ್ತು ಕಲ್ಲೂರು, ವೀರಣ್ಣನ ಬೆನವಳ್ಳಿ, ಹೊಳೆಹನಸವಾಡಿ, ದೇವಕಾತಿಕೊಪ್ಪ, ಚಿಕ್ಕದಾನವಂದಿ, ರಾಗಿಹೊಸಳ್ಳಿ, ಪುರಲೆ-1, ಗಾಡಿಕೊಪ್ಪ-1 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ದಿ: 13/02/2022 ರೊಳಗಾಗಿ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ , 1ನೇ ತಿರುವು, ಬಸವನಗುಡಿ, ಆಫೀಸರ್ಸ್ ಕ್ಲಬ್ ಪಕ್ಕ, ದೂ.ಸಂ. 08182-295110 ನ್ನು ಸಂಪರ್ಕಿಸುವುದು.