ಕೆಎನ್ಎನ್ ಡಿಜಿಟಲ್ ಡೆಸ್ಕ್: ಆಯುರ್ವೇದದ ವೈದ್ಯಕೀಯ ಪದ್ದತಿಯಲ್ಲಿ ಅಮೃತ ಬಳ್ಳಿಯನ್ನು ಅಮೃತವೆಂದೇ ಕರೆಯುತ್ತಾರೆ. ಇದಲ್ಲದೇ ಗುಡೂಚಿ ಸೇರಿದಂತೆ ಇತರೆ ಹೆಸರುಗಳಿಂದಲೂ ಇದನ್ನು ಕರೆಯಲಾಗುತ್ತದೆ. ಕಾಂಡವನ್ನು ನೆಟ್ಟರೆ ಸಾಕು, ವಿಸ್ತಾರವಾಗಿ ಹಬ್ಬುವ ಈ ಅಮೃತ ಬಳ್ಳಿಯಿಂದ ಮನುಷ್ಯನ ಆರೋಗ್ಯಕ್ಕೆ ಅಮೃತ ಬಳ್ಳಿಯ ಉಪಯೋಗ ಅನಂತ. ಆ ಬಗ್ಗೆ ಮುಂದೆ ಓದಿ..
ಅಮೃತ ಬಳ್ಳಿ ಗುಣದಲ್ಲಿ ಅಮೃತ ಸಮಾನವೆಂದೇ ಕರೆಯಲಾಗುತ್ತದೆ. ಇದರ ರುಚಿ ಕಹಿ ಮತ್ತು ಒಗರು ಆದ್ರೂ, ಬಳ್ಳಿಯ ಸೇವನೆಯಿಂದ ಶರೀರಕ್ಕೆ ಬಲವನ್ನು ನೀಡುತ್ತದೆ.
ನೀವು ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದರೇ, ಅಮೃತಬಳ್ಳಿಯ ಸೇವನೆ ಆ ಸಮಸ್ಯೆ ನಿವಾರಿಸುತ್ತದೆ. ಜ್ವರವನ್ನು ನೀಗಿ, ರಕ್ತ ಹೀನತೆಯನ್ನು ಹೋಗಲಾಡಿಸೋ ಗುಣ, ಇದಕ್ಕಿದೆ. ಇದಲ್ಲದೇ ಕಾಮಾಲೆಗೆ ಇದು ದಿವ್ಯೌಷಧವಾದ್ರೇ, ಮಧುಮೇಹ ರೋಗಿಗಳಿಗೆ ಹಿತಕರವಾದದ್ದಾಗಿದೆ.
ಅಮೃತ ಬಳ್ಳಿಯನ್ನು ಎರಡರಿಂದ ಮೂರು ತಿಂಗಳ ಕಾಲ ಪ್ರತಿನಿದ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಚಮಚ ಕಾಂಡದ ರಸವನ್ನು ಜೇನುತುಪ್ಪದೊಡನೆ ಆಹಾರ ಸೇವನೆಗೂ ಮೊದಲು ಸೇವಿಸುವುದರಿಂದ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ನಾಲ್ಕು ಚಮಚ ರಸಕ್ಕೆ, ಅಷ್ಟೇ ಪ್ರಮಾಣದಲ್ಲಿ ಜೇನುತಪ್ಪ ಸೇರಿಸಿ, ದಿನದಲ್ಲಿ ಮೂರು ಬಾರಿ ಸೇವಿಸುವುದರಿಂದ ಶೀತ, ಜ್ವರ, ಕೆಮ್ಮು, ನೆಗಡಿ ಎರಡು ಮೂರು ದಿನಗಳಲ್ಲೇ ಕಡಿಮೆಯಾಗುತ್ತದೆ. ನೀವು ಮಕ್ಕಳಿಗೆ ಕೊಡೋದಾದ್ರೇ.. ಇದರಲ್ಲಿ ಅರ್ಧದಿಂದ ಕಾಲು ಬಾಗ ಪ್ರಮಾಣದಲ್ಲಿ ಕೊಟ್ಟರೆ ಸಾಕು.
ಮಧುಮೇಹ ರೋಗಿಗಳು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಗೇಣು ಉದ್ದದ ಅಮೃತ ಬಳ್ಳಿಯ ಕಾಂಡವನ್ನು ಚೆನ್ನಾಗಿ ಜಗಿದು, ರಸವನ್ನು ಮಾತ್ರ ಸೇವಿಸಿದ್ರೇ, ಸಕ್ಕರೆ ಅಂಶ ಇಳಿಕೆ ಆಗಲಿದೆ. ಜೊತೆಗೆ ಕೈಕಾಲು ಉರಿ, ಸುಸ್ತು, ದೌರ್ಬಲ್ಯ ಕಡಿಮೆಯಾಗಲಿದೆ. ಚರ್ಮರೋಗ ಕಣ್ಮರೆ.
ಮೂಲವ್ಯಾಧಿಯಿಂದ ಬಳಲುತ್ತಿರೋರು ಮೂರು ಚಮಚ ರಸಕ್ಕೆ ಒಂದು ಲೋಟ ಮಜ್ಜಿಗೆ ಸೇರಿಸಿ ದಿನದಲ್ಲಿ ಎರಡು ಮೂರು ಬಾರಿ ಕುಡಿಯೋದ್ರಿಂದ, ರಕ್ತಸ್ತ್ರಾವ ಆಗ್ತಾ ಇದ್ರೇ ನಿಲ್ಲಲಿದೆ. ಅಲ್ಲದೇ ಮಲಬದ್ಧತೆ ಕೂಡ ನಿವಾರಣೆಯಾಗಲಿದೆ.
ಇನ್ನೂ ಕಾಮಾಲೆ ರೋಗದಿಂದ ನೀವು ಬಳಲುತ್ತಿದ್ದರೇ, ಅಮೃತ ಬಳ್ಳಿಯ ನಾಲ್ಕು ಚಮಚ ರಸಕ್ಕೆ, ಒಂದು ಚಮಚ ಜೇನುತುಪ್ಪ ಸೇರಿಸಿ, ಬೆಳಿಗ್ಗೆ ಆಹಾರಕ್ಕೆ ಮೊದಲು ಸೇವಿಸಿದ್ರೇ, ರೋಗ ಕಡಿಮೆಯಾಗಲಿದೆ. ಹೀಗೆ ಐದರಿಂದ ಏಳುದಿನಗಳು ತೆಗೆದುಕೊಳ್ಳಬೇಕು. ಆದ್ರೇ.. ಯಾವುದಕ್ಕೂ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆಯೋದು ಮರೆಯಬೇಡಿ.