ʼಅಮ್ಮಾ ಬ್ರಹ್ಮಚಾರಿಣಿ..ನಾವು ನಿಮಗೆ ನಮಿಸುತ್ತಿದ್ದೇವೆʼ: ಪ್ರಧಾನಿ ಮೋದಿ..! – Kannada News Now


India

ʼಅಮ್ಮಾ ಬ್ರಹ್ಮಚಾರಿಣಿ..ನಾವು ನಿಮಗೆ ನಮಿಸುತ್ತಿದ್ದೇವೆʼ: ಪ್ರಧಾನಿ ಮೋದಿ..!

ಡಿಜಿಟಲ್‌ ಡೆಸ್ಕ್: ದೇಶದಲ್ಲಿ ನಿನ್ನೆಯಿಂದ ದಸರಾ ನವರಾತ್ರಿ ಸಂಭ್ರಮ ಶುರುವಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೇಶದ ಜನರಿಗೆ ಹಬ್ಬದ ಶುಭಾಶಯ ಕೋರಿದ್ದರು. ಅದ್ರಂತೆ 2ನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ನೆನೆದು ಟ್ವೀಟ್ ಮೂಲಕ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ.

ವಿಡಿಯೋಗೆ ಅಡಿಬರಹ ಬರೆದಿರುವ ಪ್ರಧಾನಿ “ಅಮ್ಮಾ ಬ್ರಹ್ಮಚಾರಿಣಿ..ನಾವು ನಿಮಗೆ ನಮಿಸುತ್ತಿದ್ದೇವೆ..ನಿನ್ನ ದಯೆ, ಸಹಾನುಭೂತಿಯೊಂದಿಗೆ ನಮ್ಮನ್ನು ಆಶೀರ್ವದಿಸು. ಈ ದೇಶಕ್ಕೆ ಸೇವೆ ಸಲ್ಲಿಸುವ, ಸಂತೋಷವನ್ನು ಪಸರಿಸುವ ಶಕ್ತಿಯನ್ನು, ಉತ್ಸಾಹವನ್ನು ನಾವು ನಿನ್ನಿಂದಲೇ ಪಡೆಯುತ್ತಿದ್ದೇವೆ” ಎಂದಿದ್ದಾರೆ.

ಅಂದ್ಹಾಗೆ, ಪುರಾಣದಲ್ಲಿ ಉಲ್ಲೇಖವಿರುವಂತೆ, ಬ್ರಹ್ಮಚಾರಿಣಿ ದೇವಿ ದುರ್ಗಾಮಾತೆಯ ಎರಡನೇ ಅವತಾರ. ಬಲಗೈಯಲ್ಲಿ ಜಪಮಾಲೆ, ಎರಡಗೈಯಲ್ಲಿ ಕಮಂಡಲ ಹಿಡಿದ ಈ ತಾಯಿ ದಕ್ಷ ಮಹಾರಾಜನ ಪುತ್ರಿ. ಶಿವನನ್ನ ಒಲಿಸಿಕೊಳ್ಳಲು ಮಾಡಿದ ಕಠಿಣ ತಪಸ್ಸಿನಿಂದ ಪಾರ್ವತಿ ದೇವಿಗೆ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂತಂತೆ.
error: Content is protected !!