ಒಂದಿಂಚು ಭೂಮಿಯನ್ನೂ ಬಿಟ್ಟು ಕೊಡಲ್ಲ, ರಾಜಿಯ ಪ್ರಶ್ನೆಯೇ ಇಲ್ಲ: ಅಮಿತ್ ಶಾ ಖಡಕ್‌ ವಾರ್ನಿಂಗ್..!‌ – Kannada News Now


India

ಒಂದಿಂಚು ಭೂಮಿಯನ್ನೂ ಬಿಟ್ಟು ಕೊಡಲ್ಲ, ರಾಜಿಯ ಪ್ರಶ್ನೆಯೇ ಇಲ್ಲ: ಅಮಿತ್ ಶಾ ಖಡಕ್‌ ವಾರ್ನಿಂಗ್..!‌

ನವದೆಹಲಿ: ಭಾರತ ಗಡಿ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದು, ನಾವು ಒಂದಿಂಚು ನೆಲವನ್ನೂ ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಲಡಾಖ್ ಗಡಿ ಘರ್ಷಣೆ ಹಾಗೂ ಗಡಿಗಳ ಸುರಕ್ಷತೆ ಕುರಿತು ಮಾತನಾಡಿದ ಅಮಿತ್ ಶಾ, ಭಾರತದ ಗಡಿಗಳ ಸುರಕ್ಷತೆ ವಿಷಯದಲ್ಲಿ ಮೋದಿ ಸರ್ಕಾರ ಉದಾಸೀನ ತೋರಲು ಸಾಧ್ಯವೇ ಇಲ್ಲ. ಇನ್ನು ಗಡಿ ಸುರಕ್ಷತೆ ಮೋದಿ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಈ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿವರು, ಇದೇ ವೇಳೆ ಲಡಾಖ್ ಉದ್ವಿಗ್ನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಚೀನಾದೊಂದಿಗೆ ರಾಜತಾಂತ್ರಿಕ ಹಾಗೂ ಮಿಲಿಟರಿ ಮಾತುಕತೆಗಳು ನಡೆಯುತ್ತಿವೆ. ಶಾಂತಿಯುತ ಮರ್ಗದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಮ್ಮ ನಿಲುವಾಗಿದ್ದು, ಈ ನಿಟ್ಟಿನಲ್ಲಿ ಚೀನಾ ಕೂಡ ನಮ್ಮೊಂದಿಗೆ ಕೈಜೋಡಿಸಿದಾಗ ಮಾತ್ರ ಸಮಸ್ಯೆ ಇತ್ಯರ್ಥವಾಗಲಿದೆ ಎಂದಿದ್ದಾರೆ.
error: Content is protected !!