ಜಿನೀವಾ: ಜಾಗತಿಕವಾಗಿ ಮಂಕಿಪಾಕ್ಸ್ (Monkeypox) ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಹೆಚ್ಚು ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಸಭೆ ನಡೆಸಿತ್ತು. ಈ ವೇಳೆ ಪುರುಷ ಪುರುಷರೊಂದಿಗೆ ಸಂಭೋಗಿಸುವವರಲ್ಲಿ ಹೆಚ್ಚಾಗಿ ಈ ಸೋಂಕು ಕಂಡುಬರುತ್ತಿದೆ ಎಂದು WHO ತಿಳಿಸಿದೆ.

ಕಳೆದ ಶನಿವಾರ ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸೋಂಕು ತಗುಲದಂತೆ ಎಲ್ಲಾ ಸಂಪರ್ಕಗಳಿಂದ ದೂರ ಇರುವುದೇ ಮಂಕಿಪಾಕ್ಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ.

ಪುರುಷರೊಂದಿಗೆ ಸಂಭೋಗಿಸುವ ಪುರುಷರು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡುವುದು ಸೇರಿದಂತೆ, ಹೊಸ ಸಂಗಾತಿಯೊಂದಿಗೆ ಲೈಂಗಿಕತೆ ಬೆಳೆಸುವುದನ್ನು ಕಡಿಮೆ ಮಾಡಬೇಕಿದೆ. ನೀವು ಹೊಸ ಯಾವುದೇ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದರೆ, ಅವರ ಸಂಪರ್ಕ ವಿವರಗಳನ್ನು ವಿನಿಮಯ ಮಾಡಿಕೊಳ್ಳುವುದು ಉತ್ತಮ. ಇದ್ರಿಂದ, ಅಗತ್ಯವಿದ್ದರೆ ಮುಂದಿನ ಪ್ರಕ್ರಿಯೆಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಮಂಕಿಪಾಕ್ಸ್ ಕಾಯಿಲೆಯು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ದೇಶಗಳಲ್ಲಿ ಸ್ಥಳೀಯವಾಗಿದ್ದು, ಮೇ ತಿಂಗಳ ಆರಂಭದಿಂದ ಈ ಸೋಂಕು ವಿವಿಧ ದೇಶಗಳಿಗೂ ಹರಡುತ್ತಿದೆ.

BMRCL: ಮೆಟ್ರೊ ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ನಿಲ್ದಾಣದ ಲಿಫ್ಟ್ ಬಳಸಲು ಟೋಕನ್….!

Video: ವೀಲ್‌‌‌ಚೇರ್ ಮೂಲಕ ಆಹಾರ ತಲುಪಿಸುತ್ತಿರುವ ವಿಶೇಷ‌ಚೇತನ: ನೆಟ್ಟಿಗರ‌ ಹೃದಯ‌ ಗೆದ್ದ Zomato ಡೆಲಿವರಿ ಬಾಯ್

ವಿದ್ಯಾರ್ಥಿಯಿಂದ ಯುಪಿಯ ಶಿಕ್ಷಕಿಯೊಬ್ಬಳು ಮಸಾಜ್ ಮಾಡಿಸಿಕೊಳ್ತಿದ್ದ Viral Video | ವೀಕ್ಷಿಸಿ

Share.
Exit mobile version