ವಾಷಿಂಗ್ಟನ್ (ಯುಎಸ್): ಇತ್ತೀಚಿನ ದಿನಗಳಲ್ಲಿ ಯುಎಸ್‌ನಲ್ಲಿ ಆಗಾಗ್ಗೆ ಗುಂಡಿನ ದಾಳಿಗಳು ನಡೆಯುತ್ತಲೇ ಇವೆ. ಇದರಿಂದ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ʻಅಮೆರಿಕನ್ನರು ಸಾರ್ವಜನಿಕವಾಗಿ ಕೈಬಂದೂಕು(Gun) ಕೊಂಡೊಯ್ಯುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆʼ ಎಂದು ಯುಎಸ್ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಮೇ ತಿಂಗಳಲ್ಲಿ ಎರಡು ಭೀಕರ ಸಾಮೂಹಿಕ ಗುಂಡಿನ ದಾಳಿಯ ನಂತರ ಬಂದೂಕುಗಳಿಗೆ ಕಡಿವಾಣ ಹಾಕುವಂತೆ ಒತ್ತಾಯದ ಕರೆ ಹೆಚ್ಚುತ್ತಿರುವ ಹೊರತಾಗಿಯೂ, US ಸಂವಿಧಾನವು ಬಂದೂಕುಗಳನ್ನು ಹೊಂದುವ ಮತ್ತು ಕೊಂಡೊಯ್ಯುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ವಾದಿಸಿದ ವಕೀಲರ ಪರವಾಗಿ ತೀರ್ಪು ನೀಡಿದೆ.
ವ್ಯಕ್ತಿ ಮನೆಯ ಹೊರಗೆ ಹೋಗುವಾಗ ಕಾನೂನುಬದ್ಧ ಸ್ವರಕ್ಷಣೆ ಅಗತ್ಯವಿದೆ. ಇದನ್ನು ಸಾಬೀತುಪಡಿಸಲು ಆತ ಬಂದೂಕು ಪರವಾನಗಿಯನ್ನು ಪಡೆಯಬಹುದು ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ನಿರ್ಧಾರವನ್ನು ಖಂಡಿಸಿದ್ದಾರೆ. ಇದು “ಸಾಮಾನ್ಯ ಜ್ಞಾನ ಮತ್ತು ಸಂವಿಧಾನ ಎರಡಕ್ಕೂ ವಿರುದ್ಧವಾಗಿದೆ ಮತ್ತು ನಮ್ಮೆಲ್ಲರಿಗೂ ಆಳವಾಗಿ ತೊಂದರೆ ಉಂಟುಮಾಡುತ್ತದೆ” ಎಂದಿದ್ದಾರೆ.
2008 ರಲ್ಲಿ ಆತ್ಮರಕ್ಷಣೆಗಾಗಿ ಮನೆಯಲ್ಲಿ ಬಂದೂಕನ್ನು ಇಟ್ಟುಕೊಳ್ಳುವ ಹಕ್ಕಿದೆ ಎಂದು ತೀರ್ಪು ನೀಡಲಾಗಿತ್ತು. ಇದೀಗ ಬಂದೂಕನ್ನು ಸಾರ್ವಜನಿಕವಾಗಿ ಕೊಂಡೊಯ್ಯುವುದು ಮೂಲಭೂತ ಹಕ್ಕು ಎಂಬ ತೀರ್ಪು ಹೊರಬಿದ್ದಿದೆ.
ಭೀಕರ ಅಪಘಾತ: ಓವರ್‌ಟೇಕ್ ಮಾಡಲು ಹೋಗಿ ಕಮರಿಗೆ ಬಿದ್ದ ಬಸ್: ಐವರು ಸ್ಥಳದಲ್ಲೇ ಸಾವು, 47 ಮಂದಿಗೆ ಗಾಯ
BREAKING NEWS: ಮೈಸೂರಿನಲ್ಲಿ ಅಪರಣಕ್ಕೆ ಒಳಗಾಗಿದ್ದ ಬಾಲಕನನ್ನು ಕೆಲ ಗಂಟೆಯಲ್ಲೇ ರಕ್ಷಣೆ