ಸುಭಾಷಿತ :

Monday, March 30 , 2020 7:13 PM

ಅಮಿತಾಬ್ ಬಚ್ಚನ್ ಮತ್ತು ಕುಟುಂಬದ ಸದಸ್ಯರಲ್ಲಿ ಕ್ಷಮೆ ಕೋರಿದ ಅಮರ್ ಸಿಂಗ್


Wednesday, February 19th, 2020 12:38 pm

ನವದೆಹಲಿ: ಅನಾರೋಗ್ಯ ಪೀಡಿತ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಬಹಿರಂಗವಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅವರ ಕುಟುಂಬದವರ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ಫ಼ೇಸ್ ಬುಕ್ ನಲ್ಲಿ ವಿಡಿಯೋ ಮಾಡಿರುವ ಅಮರ್ ಸಿಂಗ್ ಕ್ಷಮೆ ಕೇಳಿದ್ದಾರೆ. ‘ತಂದೆಯವರ ಪುಣ್ಯತಿಥಿಯ ಸಂದೇಶವನ್ನು ಬಿಗ್ ಬಿ ಕಳುಹಿಸಿದ ನಂತರ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ತನ್ನ ಸೇಡಿನ ನಡವಳಿಕೆಯನ್ನು ಕ್ಷಮಿಸುವಂತೆ ಕೋರಿದ್ದಾರೆ.

‘ಇಂದು ನನ್ನ ತಂದೆಯವರ ಪುಣ್ಯತಿಥಿ. ಅಮಿತಾಬ್ ಬಚ್ಚನ್ ಜೀ ಅವರ ಸಂದೇಶವನ್ನು ಸ್ವೀಕರಿಸಿದೆ. ಮತ್ತೆ ನಮ್ಮ ಹಳೆಯ ಗೆಳೆತನ ನೆನಪಾಯಿತು. ನಾನೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದೇನೆ. ಈ ಸಮಯದಲ್ಲಿ ನಾನು ಅಮಿತಾಬ್ ಜೀ ಮತ್ತು ಕುಟುಂಬದವರ ಕ್ಷಮೆಯಾಚಿಸುತ್ತೇನೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ’ ಎಂದು ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ “ಅವರು ನನಗಿಂದ ದೊಡ್ಡವರು. ನನಗೆ ಆ ಅಹಂಕಾರದ ಅಮಲು ಇಳಿದಿದೆ. ನನ್ನ ಪದ ಪ್ರಯೋಗಕ್ಕೆ ಕ್ಷಮೆಯಾಚಿಸಬೇಕು ಎಂದು ನನ್ನ ಮನಸ್ಸಿಗೆ ಬಂದಿದೆ. ಬಚ್ಚನ್ ಕುಟುಂಬ ಯಾವತ್ತೂ ನನಗೆ ನಿರಾಸೆ ಮಾಡಿಲ್ಲ ಎಂದು ಅಮರ್ ಸಿಂಗ್ ವೀಡಿಯೊದಲ್ಲಿ ತಿಳಿಸಿದ್ದಾರೆ.

ಹಿಂದೆ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಅತ್ಮೀಯರಾಗಿದ್ದ ಅಮರ್ ಸಿಂಗ್ ನಂತರ ಜಯಾ ಬಚ್ಚನ್ ವಿರುದ್ಧ ಕಟು ಶಬ್ದಗಳಿಂದ ನಿಂದಿಸಿ ಎರಡು ಕುಟುಂಬಗಳು ದೂರವಾಗಿದ್ದವು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions