ಅಲೋವೆರಾ ಕತ್ತರಿಸಿದಾಗ ಬರುವ ಹಳದಿ ಲೋಳೆ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು ಎಚ್ಚರ – Kannada News Now


Beauty Tips Lifestyle

ಅಲೋವೆರಾ ಕತ್ತರಿಸಿದಾಗ ಬರುವ ಹಳದಿ ಲೋಳೆ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು ಎಚ್ಚರ

ಅಲೊವೆರಾವನ್ನು ಹೆಚ್ಚಾಗಿ ಸೌಂದರ್ಯ ಮತ್ತು ಆರೋಗ್ಯ ವೃದ್ಧಿಯ ಕಾರ್ಯದಲ್ಲಿ ಬಳಕೆ ಮಾಡಲಾಗುತ್ತದೆ. ಅಲೋವೆರಾದಿಂದ ಹಲವಾರು ರೋಗಗಳ ನಿವಾರಣೆ ಮಾಡಲಾಗುತ್ತದೆ. ಹಲವಾರು ಜನ ಅಲೋವೆರಾ ಜ್ಯೂಸ್‌ ಬಳಕೆ ಮಾಡಿದರೆ, ಇನ್ನೂ ಕೆಲವರು ಇದರ ಜೆಲ್‌ ಬಳಕೆ ಮಾಡುತ್ತಾರೆ. ಆದರೆ ಇದರ ಅರ್ಥ ಅಲೋವೆರಾ ಎಲ್ಲಾ ವಿಧಾನದಲ್ಲೂ ನಿಮ್ಮ ಶರೀರದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಅಲ್ಲ, ಇದರಿಂದ ಹಲವಾರು ನಷ್ಟಗಳು ಸಹ ಉಂಟಾಗುತ್ತವೆ.

ಇದನ್ನು ಓದಿದರೆ ನೀವು ಶಾಕ್‌ ಆಗಬಹುದು. ಅಲೋವೆರಾದಿಂದ ಯಾವುದಾದರು ಸಮಸ್ಯೆ ಹೇಗೆ ಉಂಟಾಗುತ್ತದೆ ಎಂದು… ಆದರೆ ಯಾವ ಸ್ಥಿತಿಯಲ್ಲಿ ಇದರ ಅಡ್ಡ ಪರಿಣಾಮ ಉಂಟಾಗುತ್ತದೆ ಅನ್ನೋದನ್ನು ನಾವು ಹೇಳುತ್ತೇವೆ ನೋಡಿ..

ನೀವು ಅಲೋವೆರಾವನ್ನು ಕತ್ತರಿಸುವ ಸಂದರ್ಭದಲ್ಲಿ ಅದರಿಂದ ಹರಿಯುವ ಹಳದಿ ಪದಾರ್ಥವನ್ನು ನೋಡುತ್ತೀರಿ. ಇದನ್ನು ಎಲೋ ಲೆಕ್ಟೆಸ್‌ ಎಂದು ಕರೆಯುತ್ತಾರೆ. ಈ ಹಳದಿ ವಸ್ತು ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಅಲ್ಲದೇ ಕ್ಯಾನ್ಸರ್‌ಗೂ ಸಹ ಇದು ಕಾರಣವಾಗುತ್ತದೆ.

ಅಲೋವೆರಾದಿಂದ ಹೊರಬರುವ ಈ ಹಳದಿ ಬಣ್ಣದಲ್ಲಿ ಲೆಕ್ಟೋಸ್‌ ಟಾಕ್ಸಿಕ್‌ ಇರುತ್ತದೆ ಎಂದು ವಿಶೇಷಜ್ಞರು ಹೇಳುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟಾಕ್ಸಿಕ್‌ ಇದ್ದರು ಅದನ್ನು ಅಷ್ಟಾಗಿ ಗಮನಿಸಲಾಗುವುದಿಲ್ಲ. ಆದರೆ ಈ ಟಾಕ್ಸಿನ್‌ ಕ್ಯಾನ್ಸರ್‌ ಉಂಟು ಮಾಡಬಹುದು ಎಂದು ಸಂಶೊಧನೆಯೊಂದು ತಿಳಿಸಿದೆ.

ಗರ್ಭಾವಸ್ಥೆಯಲ್ಲಿ ಹಳದಿ ಲೆಕ್ಟೆಕ್ಸ್‌ ತಪ್ಪಿಯೂ ಬಳಕೆ ಮಾಡಬೇಡಿ. ಮೇರಿಲ್ಯಾಂಡ್‌ ಮೆಡಿಕಲ್‌ ಸೆಂಟರ್‌ ಯುನಿವರ್ಸಿಟಿ ರಿಪೋರ್ಟ್‌ ಅನುಸಾರ ಇದು ಯುಟೇರಿನ್‌ ಕಾಂಟ್ರೆಕ್ಷನ್‌ ಉಂಟು ಮಾಡುತ್ತದೆ. ಇದರಿಂದ ಗರ್ಭಪಾತವಾಗುವ ಸಂಭವವಿದೆ ಎಂದು ಹೇಳಿದೆ.

ಯಾವ ರೀತಿ ಉಪಯೋಗ ಮಾಡಬಹುದು ? ಮೊದಲಿಗೆ ಅಲೋವೆರಾ ಎಲೆಯನ್ನು ತೆಗೆದು ಅದನ್ನು ಹಾಗೇ ಬಿಡಿ. ಸ್ವಲ್ಪ ಹೊತ್ತಿನ ಬಳಿಕ ಅದರಲ್ಲಿರುವ ಲೆಕ್ಟೆಕ್ಸ್‌ ಪೂರ್ತಿಯಾಗಿ ಹರಿದು ಹೋಗುತ್ತದೆ. ನಂತರ ಅದನ್ನು ತೊಳೆದು ಬಳಕೆ ಮಾಡಬಹುದು.
error: Content is protected !!