ಚೆನ್ನೈ: ದಕ್ಷಿಣ ರೈಲ್ವೇ ಹಿಂದಿ ಹೇರಿಕೆಗೆ ಮುಂದಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಿರುಪ್ಪೂರ್ ರೈಲ್ವೆ ನಿಲ್ದಾಣದ ಅಧಿಕಾರಿಗಳು ಸಹ್ಯೋಗ್ ಎಂಬ ಹಿಂದಿ ಫಲಕವನ್ನು ತೆಗೆದುಹಾಕಿರುವ ಘಟನೆ ನಡೆದಿದೆ.

BREAKING NEWS : ಚೀನಾ ಮಾಜಿ ಅಧ್ಯಕ್ಷ ‘ಜಿಯಾಂಗ್ ಜೆಮಿನ್’ ನಿಧನ |Former Chinese President Jiang Zemin dies

ತಿರುಪ್ಪೂರ್ ರೈಲು ನಿಲ್ದಾಣದಲ್ಲಿ ಹಿಂದಿಯಲ್ಲಿ ‘ಸಹ್ಯೋಗ್’ ಎಂಬ ನಾಮಫಲಕ ಹಾಕಲಾಗಿತ್ತು. ಹಿಂದಿ ಜೊತೆಗೆ ತಮಿಳು ಮತ್ತು ಇಂಗ್ಲಿಷ್ ನಲ್ಲಿಯೋ ಅದೇ ಪದಗಳನ್ನು ಹಾಕಲಾಗಿತ್ತು. ಆದರೆ ಇಂಗ್ಲಿಷ್ ಮತ್ತು ತಮಿಳು ಆವೃತ್ತಿಗಳು ಹಿಂದಿ ಪದದ ಲಿಪ್ಯಂತರವಾಗಿದ್ದು, ಜನರಿಗೆ ಅರ್ಥವಾಗುತ್ತಿಲ್ಲ ಎಂದು ಪ್ರಯಾಣಿಕರಿಂದ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲಯಲ್ಲಿ ನಾಮಫಲವನ್ನು ನಿಲ್ದಾಣದಿಂದ ತೆಗೆದು ಹಾಕಲಾಗಿದೆ ಎನ್ನಲಾಗುತ್ತಿದೆ.

ಈ ಕುರಿತಂತೆ ತಿರುಪ್ಪೂರು ಮೂಲದ ಉಡುಪು ರಫ್ತುದಾರರಾದ ಷಣ್ಮುಗನಾಥನ್  ಎಂಬುವವರು ಮಾತನಾಡಿದ್ದು, ನಮಗೆ ಇಂಗ್ಲಿಷ್ ಮತ್ತು ಹಿಂದಿ ಗೊತ್ತು. ಆದರೆ ತಮಿಳು ಮಾತ್ರ ತಿಳಿದಿರುವ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಜನರಿಗೆ ಸಹಾಯ ಮಾಡಲು ದಕ್ಷಿಣ ರೈಲ್ವೆಯು ಸಹಯೋಗ್ ತಮಿಳು ಅರ್ಥವನ್ನು ತಮಿಳಿನಲ್ಲಿ ಬರೆಯಬೇಕಿತ್ತು. ಇದನ್ನು ನೋಡಿದರೆ ತಿರುಪ್ಪೂರ್ ರೈಲು ನಿಲ್ದಾಣದಲ್ಲಿ ಹಿಂದಿಯನ್ನು ಹೇರುವ ಉದ್ದೇಶಿತ ಕ್ರಮವಾಗಿದ ಎಂದೆನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಬಳಿಕ ರೈಲ್ವೇ ಇಲಾಖೆ ಹಿಂದಿ ಫಲಕಗಳನ್ನು ತೆಗೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಬಲ ವನ್ನಿಯಾರ್ ಸಮುದಾಯದ ರಾಜಕೀಯ ಅಂಗವಾದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ರೈಲ್ವೇಸ್ ಹಿಂದಿಯಲ್ಲಿ ಮಾತ್ರ ಫಲಕಗಳನ್ನು ಹೊರತರುವುದರ ವಿರುದ್ಧ ಬಲವಾಗಿ ಖಂಡಿಸಿದ್ದು, ಇದು ತಮಿಳುನಾಡಿನಲ್ಲಿ ಹಿಂದಿ ಹೇರುವ ಉದ್ದೇಶದ ನಡೆ ಎಂದು ಪಿಎಂಕೆ ಸಂಸ್ಥಾಪಕ ನಾಯಕ ಡಾ.ಎಸ್.ರಾಮದಾಸ್ ಹೇಳಿದ್ದಾರೆ.

ತಿರುಪ್ಪೂರ್‌ನ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಅತಿಥಿ ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ಹಿಂದಿಯಲ್ಲಿ ಫಲಕಗಳನ್ನು ಹಾಕಲಾಗಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

BIGG NEWS : ಬೆಂಗಳೂರಲ್ಲಿ ‘ಲಿವ್ ಇನ್ ರಿಲೇಶನ್‌ಶಿಪ್‍’ನಲ್ಲಿದ್ದ ಪ್ರೇಮಿಗಳ ನಡುವೆ ಗಲಾಟೆ : ಕೊಲೆಗೈದು ಅಂತ್ಯಗೊಳಿಸಿದ ಪ್ರಿಯಕರ

Share.
Exit mobile version