ಬೆಂಗಳೂರು : ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ಅನುಮತಿ ನೀಡಿಲ್ಲ, ಒಂದು ವೇಳೆ ಕಾರ್ಯಾಚರಣೆ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಅಯುಕ್ತ ನರೇಂದ್ರ ಹೋಳ್ಕರ್ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿರುವ ಅವರು ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ಅನುಮತಿ ನೀಡಿಲ್ಲ, ಒಂದು ವೇಳೆ ಕಾರ್ಯಾಚರಣೆ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು. ಅನುಮತಿ ಇಲ್ಲದಿದ್ದರೂ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆ ನಡೆಸುವುದು ಮೋಟಾರು ವಾಹನ ಕಾಯಿದೆ ಉಲ್ಲಂಘನೆ ಆಗಿದೆ. ಸಾರ್ವಜನಿಕರು ಇಂತಹ ಬೈಕ್ ಟ್ಯಾಕ್ಸಿ ಸೇವೆ ಪಡೆಯಬಾರದು. ನಿಯಮ ಮೀರಿದ್ರೆ ಮೋಟಾರು ವಾಹನ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆ ಬಗ್ಗೆ ಕೋರ್ಟ್ ನಲ್ಲಿ ಕೇಸ್ ಇದೆ. ಈ ಕುರಿತು ನ್ಯಾಯಾಲಯ ತೀರ್ಮಾನ ಪ್ರಕಟಿಸಲಿದೆ. ಆದರೆ ಬೈಕ್ ಟ್ಯಾಕ್ಸಿ ಆಗಿ ಕಾರ್ಯಾಚರಣೆಗೆ ಅನುಮತಿ ಇಲ್ಲ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಅಯುಕ್ತ ನರೇಂದ್ರ ಹೋಳ್ಕರ್ ಸ್ಪಷ್ಟಪಡಿಸಿದ್ದಾರೆ.