ಮಂಡ್ಯ: ಟ್ರ್ಯಾವೆಲ್ಸ್ ಮಾಲೀಕರು ಕಾರುಗಳನ್ನು ಲೀಸ್ಗೆ ನೀಡುವ ಮುನ್ನ ಎಚ್ಚರದಿಂದಿರಬೇಕು. ನೀವು ಸ್ವಲ್ಪ ಯಾಮಾರಿದ್ರೂ ಕುತ್ತು ಬರುವ ಸಾಧ್ಯತೆ ಇದೆ. ಯಾಂಕದರೆ ಇಲ್ಲೊಂದು ಜಿಲ್ಲೆಯಲ್ಲಿ ಕಾರನ್ನು ಲೀಸ್ಗೆ ಪಡೆದು ಅದರ ನಂಬರ್ ಪ್ಲೇಟ್, ಕಾರಿನ ಬಣ್ಣ ಬದಲಾಯಿಸಿ ಕಾರನ್ನು ಅಡವಿಟ್ಟು ಹಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
BIG NEWS:ಇಂದು ಸದನದಲ್ಲೇ ದಾಖಲೆಸಹಿತ ಸಚಿವರೊಬ್ಬರ ಅಕ್ರಮ ಬಯಲು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಹೌದು ಮಂಡ್ಯದಲ್ಲಿ ಕಾರನ್ನು ಲೀಸ್ಗೆ ಪಡೆದು ಅದರ ನಂಬರ್ ಪ್ಲೇಟ್, ಕಾರಿನ ಬಣ್ಣ ಬದಲಾಯಿಸಿ ಕಾರನ್ನು ಅಡವಿಟ್ಟು ಹಣ ಮಾಡುತ್ತಿದ್ದ ಕಿಲಾಡಿ ಖದೀಮನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
BIG NEWS:ಇಂದು ಸದನದಲ್ಲೇ ದಾಖಲೆಸಹಿತ ಸಚಿವರೊಬ್ಬರ ಅಕ್ರಮ ಬಯಲು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ನಿಮ್ಮ ಕಾರನ್ನ ರೆಂಟ್ ಗೆ ಪಡೆದು ಬಳಿಕ ಅದನ್ನು ಅಡಮಾನ ಇಡುವ ಖತರ್ನಾಕ್ ಖದೀಮರು ಇದ್ದಾರೆ. ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಕಾರು ಅಡ ಇಟ್ಟು ಹಣ ಪಡೆಯುತ್ತಾರೆ. ಇದೇ ರೀತಿ 19 ಕಾರುಗಳನ್ನು ರೆಂಟ್ ಗೆ ಪಡೆದು ಬಳಿಕ ಅದರ ನಂಬರ್ ಪ್ಲೇಟ್, ಬಣ್ಣ ಬದಲಾಯಿಸಿ ಅಡಮಾನವಿಟ್ಟಿದ್ದ ಕಿಲಾಡಿ ಅರೆಸ್ಟ್ ಆಗಿದ್ದಾನೆ. ಹಲಗೂರು ಪೊಲೀಸರು ಆರೋಪಿ ಕುಮಾರಸ್ವಾಮಿ ಎಂಬುವವನನ್ನು ಬಂಧಿಸಿದ್ದಾರೆ.