‘ವಿಮಾನಯಾನಿ’ಗಳಿಗೆ ಶುಭಸುದ್ಧಿ: ಏರ್ ಇಂಡಿಯಾ ತರುತ್ತಿದೆ ‘ರಮಣೀಯ’ ಪ್ರಯಾಣ ಯೋಜನೆ..! – Kannada News Now


India

‘ವಿಮಾನಯಾನಿ’ಗಳಿಗೆ ಶುಭಸುದ್ಧಿ: ಏರ್ ಇಂಡಿಯಾ ತರುತ್ತಿದೆ ‘ರಮಣೀಯ’ ಪ್ರಯಾಣ ಯೋಜನೆ..!

ಡಿಜಿಟಲ್‌ ಡೆಸ್ಕ್‌: ಪ್ರಯಾಣ ಮಾಡಲು ಬಯಸುವವರಿಗೆ, ಆದರೆ ಎಲ್ಲೂ ಹೋಗದವರಿಗಾಗಿ ಏರ್ ಇಂಡಿಯಾ ಹೊಸ ಯೋಜನೆಯೊಂದನ್ನು ಆರಂಭಿಸಲು ಮುಂದಾಗಿದೆ. ‘ flights to nowhere’ ಎಂಬ ಕಾರ್ಯಕ್ರಮದಡಿ, ಏರ್ ಇಂಡಿಯಾ ಪ್ರಯಾಣಿಕರನ್ನು ಆಕಾಶದಲ್ಲಿ ಒಂದು ಸುಂದರವಾದ ಪ್ರಯಾಣಕ್ಕಾಗಿ ಕರೆದೊಯ್ಯಲಿದೆ. ಆಸ್ಟ್ರೇಲಿಯಾದ ಕ್ವಾಂಟಾಸ್ ಏರ್ ವೇಸ್‌ನ ಹಾದಿಯ ನಂತರ, ಬಜೆಟ್ ಏರ್ ಲೈನ್ಸ್ ಗಳು ಅದೇ ವಿಮಾನ ನಿಲ್ದಾಣದಲ್ಲಿ ವಿಮಾನವನ್ನ ಟೇಕಾಫ್ ಮಾಡಿ ಕೆಳಗಿಳಿಸಲಿದೆ.

ಏರ್ ಇಂಡಿಯಾ ‘scenic joy flights’ ಹೆಸ್ರಲ್ಲಿ ತನ್ನ ಪ್ರಯಾಣಿಕರಿಗೆ ಕಡಿಮೆ ಹಾರಾಟದ ಪ್ರಯಾಣವನ್ನ ನೀಡಲಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಹೌದು, ನಾವು ಒಂದು ಸುಂದರ ವಿಮಾನ ಸೇವೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಉಳಿದ ವಿವರಗಳನ್ನ ನಿರ್ಧರಿಸಲಾಗುವುದು’ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

BREAKING : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ : ಮಾದಕ ನಟಿಯರಿಗೆ ‘ಇಡಿ’ ಸಂಕಷ್ಟ

ಆಸ್ಟ್ರೇಲಿಯಾದ ಕ್ವಾಂಟಾಸ್ ಇತ್ತೀಚೆಗೆ ಏಳು ಗಂಟೆಗಳ ಹಾರಾಟವನ್ನು ಘೋಷಿಸಿದ್ದು, ಈ ಅವಧಿಯಲ್ಲಿ ಪ್ರಯಾಣಿಕ ಗ್ರೇಟ್ ಬ್ಯಾರಿಯರ್ ರೀಫ್ ಮತ್ತು ಸಿಡ್ನಿ ಹಾರ್ಬರ್ ನಂತಹ ಆಕರ್ಷಣೆಗಳನ್ನು ಗುರುತಿಸಬಲ್ಲರು. ರಾಯಲ್ ಬ್ರೂನಿ ಕೂಡ ಇದೇ ರೀತಿಯ ವಿಮಾನಗಳನ್ನು ಪ್ರಯಾಣಿಕರಿಗಾಗಿಯೇ ನಿರ್ವಹಿಸುತ್ತದೆ.

ʼʼಆನಂದದ ವಿಮಾನಗಳು’ ಮರಳಿ ಹಾರಾಟದ ಅನುಭವ ನೀಡಲಿವೆ ಮತ್ತು ಹಿಂದೆಂದೂ ಅನುಭವಕ್ಕೆ ಬರದಂಥ ಅನುಭವವೂ ಆಗುತ್ತೆ. ಭಾರತೀಯ ವಿಮಾನ ಪ್ರಯಾಣಿಕರು ಇದನ್ನು ಸ್ವಾಗತಿಸುವ ನಿರೀಕ್ಷೆ ಇದೆ’ ಎಂದು ಮತ್ತೊಬ್ಬ ಅಧಿಕಾರಿ ಎಚ್ ಟಿ ಗೆ ತಿಳಿಸಿದ್ದಾರೆ. ಈ ಸೇವೆಗೆ ಬೋಯಿಂಗ್ 747 ನಂತಹ ವಿಶಾಲ-ದೇಹದ ವಿಮಾನವನ್ನ ಬಳಸಲಾಗುವುದಂತೆ.

ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ – ಸಂಸದ ಪ್ರತಾಪ್ ಸಿಂಹ ಸಂಸತ್ ನಲ್ಲಿ ಮನವಿ

ಮೇ ತಿಂಗಳಲ್ಲಿ ಎರಡು ತಿಂಗಳ ಅಂತರದ ನಂತರ ದೇಶೀಯ ವಿಮಾನ ಹಾರಾಟಕ್ಕೆ ಭಾರತ ಅನುಮತಿ ನೀಡಿದೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ‘ಏರ್ ಬಬಲ್ ‘ ವ್ಯವಸ್ಥೆ ಮತ್ತು ವಂದೇ ಭಾರತ್ ಮಿಷನ್ ಅಡಿಯಲ್ಲಿ ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳು ಲಭ್ಯವಿದೆ.
error: Content is protected !!