ನವದೆಹಲಿ: ಸೋಮವಾರ ತಮ್ಮ ವಿರುದ್ದ ಕೇಳಿ ಬಂದಿರುವ ಹಣ ವರ್ಗವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಡಿ ಕೆ ಶಿವಕುಮಾರ್‌ ನವದೆಹಲಿಯಲ್ಲಿರುವ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು.

ಇದೇ ವೇಳೆ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು 36 ವರ್ಷಗಳ ಹಿಂದಿನ ಬ್ಯಾಂಕ್‌ ದಾಖಲೆಗಳನ್ನು ಕೇಳಿದ್ದಾರೆ, ಇಡಿಗೆ ಸಂಪೂರ್ಣ ಸಹಕರವನ್ನು ನೀಡಲಾಗುವುದು ಅಂತ ತಿಳಿಸಿದರು. ಇನ್ನೂ ಬರೋಬ್ಬರಿ ನಿನ್ನೆ 6 ತಾಸುಗಳ ಇಡಿ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಡಿಕೆ ಶಿವಕುಮಾರ್‌ ದಾಖಲಾತಿಗಳನ್ನು ನೀಡಲು ಸಮಯವನ್ನು ಕೇಳಲಾಗಿದೆ. ಒಂದು ಸಾರಿ ಇಡಿ ಕೇಸ್‌ ಹಾಕಿ ಚಾರ್ಚ್‌ ಹಾಕಿದ ಮೇಲೆ ಮತ್ತೆ ಕೇಸ್‌ ಹಾಕುವ ಅವಶ್ಯಕತೆ ಇಲ್ಲ, ತಮ್ಮ ಹುಟ್ಟೂರಿನಲ್ಲಿ ಖರೀದಿ ಮಾಡಿರುವ ಆಸ್ತಿ ಬಗ್ಗೆ ಮತ್ತು ಯಂಗ್ ಇಂಡಿಯಾಕ್ಕೆ ಸಂಬಂಧಪಟ್ಟಂತೆ ಕೂಡ ಮಾಹಿತಿ ಕೇಳಿದೆ ಇದಕ್ಕೆ ದಾಖಲೆ ನೀಡುವಂತೆ ಕೇಳಿದ್ದು ಸಮಯ ಕೇಳಿರುವೆ ಅಂತ ಹೇಳಿದ್ದಾರೆ.

Share.
Exit mobile version