ಬೆಂಗಳೂರು: PAY CM ಬಳಿಕ ಕೈನಿಂದ ಮತ್ತೊಂದು ಅಸ್ತ್ರ ಪ್ರಯೋಗ ಮಾಡಲು ಶುರುವಾಗಿದ್ದು, ಈ ನಡುವೆ ಆಟೋಗಳ ಮೇಲೆ ಪೋಸ್ಟರ್‌ ಹಚ್ಚಿ 40% ಸರ್ಕಾರವೆಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

‘ಪೇ ಸಿಎಂ’ ಪೋಸ್ಟರ್ ಅಂಟಿಸೋಕೆ ಬನ್ನಿ : ಮತ್ತೆ ಪಕ್ಷದ ಶಾಸಕರಿಗೆ ‘ಡಿಕೆಶಿ’ ಕರೆ : ಹೇಳ್ದಂಗೆ ಮಾಡ್ತಾರಾ ‘ಕನಕಪುರ ಬಂಡೆ’..?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ನಗರದಲ್ಲಿ ‘ಪೇ ಸಿಎಂ’ ಪೋಸ್ಟರ್‌ಗಳನ್ನು ಹಾಕಿದ ಪ್ರಕರಣದ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿನ್ನೆ” ನಾಳೆ ನಗರದಲ್ಲಿ ಶಾಸಕರೆಲ್ಲರೂ ಸೇರಿ ಮತ್ತೆ ʻ ಪೇ ಸಿಎಂ ಪೋಸ್ಟರ್‌ ಅಂಟಿಸುತ್ತೇವೆʼ ಏನ್‌ ಮಾಡ್ತಾರೆ ಎಂದು ನೋಡೊಣ ಎಂದು ಸವಾಲ್ ಹಾಕಿದ್ದರು.

ಅಂತೆಯೇ ರಾಜ್ಯ ಸರ್ಕಾರಕ್ಕೆ ಸವಾಲೊಡ್ಡುವಂತೆ ಕಾಂಗ್ರೆಸ್ ವತಿಯಿಂದ ಸರ್ಕಾರಿ ಕಚೇರಿ ಗೋಡೆ ‘ಪೇ ಸಿಎಂ’ ಪೋಸ್ಟರ್ ಅಂಟಿಸಲು ಕೈ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದ್ದರಿಂದ ಪಕ್ಷದ ಶಾಸಕರೊಗೆ ಕೆಪಿಸಿಸಿ ಕಚೇರಿಗೆ ಬರುವಂತೆ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ನಿನ್ನೆ ಸಿಎಂ ಪೋಸ್ಟರ್‌ ಅಂಟಿಸಿದ್ದಕ್ಕೆ ಈಗಾಗಲೇ ಕ್ಯೂಆರ್‌ ಕೋಡ್‌ಗೆ ಈಗಾಗಲೇ ಅನೇಕ ದೂರು ಬಂದಿದೆ. ಅಧಿಕಾರದಲ್ಲಿ ಇರುವವರು ಇದನ್ನೆಲ್ಲ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರನ್ನು ಬಂಧಿಸಿದ್ದನ್ನು ನಾನು ಖಂಡಿಸ್ತೇನೆ. ನಾಳೆ ನಾವೇ ನಗರದಲ್ಲಿ ನಮ್ಮ ಶಾಸಕರೆಲ್ಲರೂ ಸೇರಿಕೊಂಡು ಪೇ ಸಿಎಂ ಪೋಸ್ಟರ್‌ ಅಂಟಿಸುತ್ತೇವೆ. ಏನು ಮಾಡುತ್ತಾರೆ ನೋಡಿಯೇ ಬಿಡೋಣ. ನಮ್ಮ ಮೇಲೆಯೂ ಅವರು ಕೆಲ ಕ್ಯೂಆರ್‌ ಕೋಡ್‌ ಮಾಡಿದ್ದಾರೆ. ಅದಕ್ಕೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದ್ದರು.

Share.
Exit mobile version