ದಾವಣಗೆರೆ: ನರ್ಸ್ ಪ್ರೀತಿಸಿ ಮದುವೆಯಾದ ವೈದ್ಯ ಮಗುವಾದ ಮೇಲೆ ಪರಾರಿಯಾಗಿರುವ ಘಟನೆ ನಡೆದಿದೆ. ವಿಜಯಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಘಟನೆ ನಡೆದಿದೆ.
ಆಕೆಯನ್ನು ಪ್ರೀತಿಸಿ, ನಂಬಿಸಿ ಮದುವೆಯಾಗಿದ್ದ ಭೂಪ ಇದೀಗ ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾನೆ. ಗಿರೀಶ ಎಂಬ ಬಿಎಂಎಸ್ ವೈದ್ಯ ಕ್ಲಿನಿಕ್ ನಡೆಸುತ್ತಿದ್ದ. ಇದೇ ಗ್ರಾಮದ ಅನ್ಯ ಜಾತಿಯ ಯುವತಿ ತ್ರಿವೇಣಿ ಗಿರೀಶ್ ಬಳಿ ಕೆಲಸಕ್ಕೆ ಬರುತ್ತಿದ್ದರು. ಈತನ ಕ್ಲಿನಿಕ್ ನಲ್ಲಿ ನರ್ಸ್ ಆಗಿ ಸೇವೆ ಆರಂಭಿಸಿದ್ದರು. ನಂತರ ಅಲ್ಲಿಂದ ಅವರಿಗೆ ಪ್ರೀತಿ ಚಿಗುರಿದೆ.
ಜಾತಿ ಧರ್ಮ ಪ್ರೀತಿಯ ಮುಂದೆ ಯಾವ ಲೆಕ್ಕ ಅಂತಾ ಪಕ್ಕದ ಕುರವತ್ತಿ ಬಸವಣ್ಣನ ದೇವಸ್ಥಾನಕ್ಕೆ ಹೋಗಿ ಮದ್ವೆ ಕೂಡ ಆಗಿದ್ದಾರೆ. ಮಗು ಕೂಡಾ ಆಗಿದೆ. ಆದ್ರೆ ಇತ್ತೀಚಿಗೆ ಡಾ.ಗಿರೀಶ್ ವರ್ತನೆ ಬದಲಾಗಿದೆ. ತ್ರಿವೇಣಿ ಇರುವಾಗಲೇ ತಮ್ಮ ಜಾತಿಗೆ ಸೇರಿದ ಯುವತಿ ಯೊಬ್ಬಳನ್ನ ಮದ್ವೆ ಆಗಿದ್ದಾನೆ ಆರೋಪ ಕೇಳಿಬಂದಿದೆ. ಇದಿರಂದ ಬೇಸತ್ತ ನರ್ಸ್ ತ್ರಿವೇಣಿ ಎಸ್ಪಿ ಎದುರಿಗೆ ಕಣ್ಣೀರಿಟ್ಟಿದ್ದಾಳೆ.
Vitamin A: ನೀವು ಈ 4 ಆಹಾರಗಳನ್ನು ಸೇವಿಸಿದ್ರೆ ದೇಹದಲ್ಲಿ ವಿಟಮಿನ್ ಎ ಕೊರತೆ ಕಡಿಮೆಯಾಗುತ್ತದೆ