ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 1,000 ಜನರು ಸಾವನ್ನಪ್ಪಿದ್ದಾರೆ ಮತ್ತು 1,500 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ್ದು, 6.1 ತೀವ್ರತೆಯು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಇದೇ ವೇಳೆ, ಘಟನೆಗೆ ಸಂಬಂಧಪಟ್ಟಂತೆ, ಮಾಧ್ಯಮಗಳಿಗೆ ಹೇಳಿಕೆಗಳನ್ನು ಬಿಡುಗಡೆ ಮಾಡಿರುವ ಅಫ್ಟನ್ ವಿಪತ್ತು ನಿರ್ವಹಣಾ ಅಧಿಕಾರಿಗಳು ಭೂಕಂಪದಲ್ಲಿ 950 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅವಘಡ ಸ್ಥಳಕ್ಕೆ, ರಕ್ಷಣಾ ಅಧಿಕಾರಿಗಳು ತೆರಳಿದ್ದು, ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ, ಗಾಯಗೊಂಡವರನ್ನು ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಅಂತ ತಿಳಿದು ಬಂದಿದೆ. ಇದಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭಾರತದ ಸುಮಾರು 119 ಮಿಲಿಯನ್ ಮಂದಿ ಭೂಕಂಪನದ ಅನುಭವನ್ನು ಅನುಭವಿಸಿದ್ದಾರೆ ಎಂದು ಇಎಂಎಸ್ಸಿ ಟ್ವೀಟ್ ಮಾಡಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಹೆಲಿಕಾಪ್ಟರ್ ಮತ್ತು ರಕ್ಷಣಾ ತಂಡಗಳು ಭೂಕಂಪನದ ಸ್ಥಳಗಳಿಗೆ ತೆರಳಿದ್ದು, ಚಿಕಿತ್ಸೆ ನೀಡಲಾಗುತ್ತಿದ್ದು, ಹಲವು ಮಂದಿಯನ್ನು ಕಾಪಾಡಲಾಗಿದೆ ಅಂತ ಹೇಳಿದ್ದಾರೆ. “ಭೂಕಂಪದಿಂದ ಬಾಧಿತರಾದ ಜನರಿಗೆ ಸಹಾಯ ಮಾಡುವುದರ ಜೊತೆಗೆ, ಘಟನ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ ಅಂತ ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಭೂಕಂಪ ಪೀಡಿತ ಪ್ರದೇಶಕ್ಕೆ ತಂಡಗಳನ್ನು ಕಳುಹಿಸಲಾಗುತ್ತಿದೆ ವಿಶ್ವಸಂಸ್ಥೆ ಇದೇ ವೇಳೆ ಹೇಳಿದೆ. ವಿಶ್ವಸಂಸ್ಥೆ ಅಫ್ಘಾನಿಸ್ತಾನದಲ್ಲಿ ಭೂಕಂಪನದಿಂದ ಉಂಟಾಗಿರುವ ಬಾಧಿತರಾದ ಎಲ್ಲಾ ಜನರಿಗೆ ಸಹಾಯ ನೀಡಲಿದೆ, ಇದಲ್ಲದೇ ಎಲ್ಲಾ ರೀತಿಯ ಸಹಾಯವನ್ನು ಮಾಡಲಿದೆ ಅಂತ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಪ್ರಧಾನ ಕಾರ್ಯದರ್ಶಿಯ ಉಪ ವಿಶೇಷ ಪ್ರತಿನಿಧಿ ಡಾ.ರಮೀಜ್ ಭೂಕಂಪದ ನಂತರ ವಿಶ್ವಸಂಸ್ಥೆಯು ಅಗತ್ಯಗಳನ್ನು ಮೌಲ್ಯಮಾಪನ ಮಾಡುತ್ತಿದ್ದು, ನಮಗೆ ಸಹಾಯ ಮಾಡಲಾಗುತ್ತಿದೆ ಅಂತ ಹೇಳಿದ್ದಾರೆ.