ಬೆಂಗಳೂರು: ಬೆಳಗಾವಿಯ್ಲಲಿ ಕಳೆದ ರಾತ್ರಿಯಂದು ಕನ್ನಡ ಧ್ವಜ ( Kannada Flag ) ಹಿಡಿದು ಕುಣಿದಂತ ಯುವಕನ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ಇದು ಕನ್ನಡಗಿರನ್ನು ಕೆರಳಿಸುವಂತೆ ಮಾಡಿತ್ತು. ಈ ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

‘ಭೂಗಳ್ಳ’ರಿಗೆ ‘ನಗರಾಭಿವೃದ್ಧಿ ಇಲಾಖೆ’ ಅಧಿಕಾರಿಗಳೇ ಸಪೋರ್ಟ್: ‘ಕ್ರಿಮಿನಲ್ ಕೇಸ್’ ದಾಖಲಿಸಲು ‘ರಮೇಶ್ ಬಾಬು’ ಒತ್ತಾಯ

ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ನಿನ್ನೆ ಸಂಜೆ ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದು ಕುಣಿಯುತ್ತಿದ್ದ ಬಾಲಕನ ಮೇಲೆ ಹಲ್ಲೆ ನಡೆಸಿದ ಬಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಐಜಿಪಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

Share.
Exit mobile version