ಛತರ್ ಪುರ್ : ಪುಟ್ಟ ಮಕ್ಕಳನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಬೇಕು. ಅವ್ರ ಮೇಲೆ ಎಷ್ಟು ಕಾಳಜಿ ವಹಿಸಿದ್ರು ಕಮ್ಮಿಯೇ ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ, ಕೊಂಚ ಯಾಮಾರಿದ್ರೂ ಜೀವಕ್ಕೆ ಕುತ್ತಾಗ್ಬೋದು. ಅದ್ರಂತೆ, ಸಧ್ಯ ಪೋಷಕರ ಅಜಾಗರೂಕತೆ ಒಂದು ವರ್ಷದ ಮಗುವಿನ ಜೀವವನ್ನೇ ತೆಗೆದುಕೊಳ್ಳುವ ಹಂತಕ್ಕೆ ತಲುಪಿತ್ತು ಅಂದ್ರೆ ನೀವು ನಂಬಲೇಬೇಕು.
ಹೌದು, ಪನ್ನಾ ರಸ್ತೆಯಲ್ಲಿ ಸ್ವಲ್ಪ ಅಜಾಗರೂಕತೆಯು ಒಂದು ವರ್ಷದ ಮಗುವಿನ ಜೀವವನ್ನ ತೆಗೆದುಕೊಳ್ಳುತ್ತಿತ್ತು. ವಾಸ್ತವವಾಗಿ, ಪನ್ನಾ ರಸ್ತೆಯಲ್ಲಿ ಕುಟುಂಬವೊಂದು ತಿಂಡಿ ತಿನ್ನಲು ಹೋಟೆಲ್ʼನಲ್ಲಿಗೆ ಬಂದಿಳಿದಿದೆ. ಆದ್ರೆ, ಈ ವೇಳೆ ಎಲ್ಲರೂ ಕಾರಿನಿಂದ ಕೆಳಗಿಳಿದರೂ ಮಗು ಕಾರಿನೊಳಗೆಯೇ ಉಳಿದಿದ್ದು, ಕಾರಿನ ಕೀ ಕೂಡ ಅಲ್ಲಿಯೇ ಉಳಿದಿದೆ. ಇನ್ನು ಈ ವೇಳೆ ಕಾರನ್ನ ಹೇಗೋ ಒಳಗಿನಿಂದ ಲಾಕ್ ಮಾಡಲಾಗಿತ್ತು.
ಕೊಂಚ ಸಮಯದ ನಂತ್ರ ಎಚ್ಚೆತ್ತುಕೊಂಡ ಪೋಷಕರು, ಕಾರಿನ ಕಡೆ ಓಡಿದ್ದಾರೆ. ಆದ್ರೆ, ಕಾರು ಲಾಕ್ ಆಗಿದ್ದು, ಕಾರಿನ ಕಿಟಕಿಯನ್ನ ತೆರೆಯಲು ಸಹ ಸಾಧ್ಯವಾಗಿಲ್ಲ. ಮಾಡಿದ ಎಲ್ಲ ಪ್ರಯತ್ನಗಳು ಕೈಕೊಟ್ಟವು. ನಂತ್ರ ಗಾಜು ಒಡೆದು ಮಗುವನ್ನ ಹೊರ ತರಲಾಗಿದೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯವಾಗಿಲ್ಲ.
BREAKING NEWS : ಪರಿಷತ್ ನ ಎರಡು ಕ್ಷೇತ್ರಗಳ ಚುನಾವಣೆಗೆ ‘ಕಾಂಗ್ರೆಸ್’ ಅಭ್ಯರ್ಥಿಗಳ ಪಟ್ಟಿ ಪ್ರಕಟ
SHOCKING NEWS : ಪಾಕಿಸ್ತಾನದಲ್ಲಿ ‘ಗನ್’ ತರಿಸಿಕೊಳ್ಳುವುದು ‘ಪಿಜ್ಜಾ’ ಆರ್ಡರ್ ಮಾಡಿದಷ್ಟೇ ಸುಲಭವಂತೆ..!