ಸಿನಿಮಾ ಡೆಸ್ಕ್ : ತೆಲಗು ಚಿತ್ರಗಳ ನಿರ್ದೇಶಕ ಕೆ.ವಾಸು ಶುಕ್ರವಾರ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು.
‘ಪ್ರಣಂ ಖರೀಡು’, ‘ಶ್ರೀ ಶಿರಡಿ ಸಾಯಿಬಾಬಾ ಮಹಾತ್ಯಂ’, ‘ಅಮೆರಿಕ ಅಲ್ಲುಡು’, ‘ಕೊಟಾಲ ರಾಯಡು’ ಚಿತ್ರ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ಸಿನಿಮಾವನ್ನು ಕೆ. ವಾಸು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡಿತು.
ಅವರ ತಂದೆ ಪ್ರತ್ಯಗತ್ಮ ಮತ್ತು ಚಿಕ್ಕಪ್ಪ ಕೆ.ಹೇಮಬಂದರ ರಾವ್ ಇಬ್ಬರೂ ಪ್ರಸಿದ್ಧ ನಿರ್ದೇಶಕರಾಗಿದ್ದರು. ಅವರು ೧೯೭೪ ರಲ್ಲಿ “ಆಡಪಿಲ್ಲಾಲ ತಂತ್ರಿ” ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.’ಪ್ರಣಮ್ ಖರೀಡು’ ಚಿತ್ರದ ಮೂಲಕ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟನಾಗಿ ಪರಿಚಯಿಸಿದರು.ಕೆ.ವಾಸು ಅವರ ಇತರ ಜನಪ್ರಿಯ ಚಿತ್ರಗಳಲ್ಲಿ “ಕೊಟಾಲ ರಾಯುಡು”, “ಕೊಟ್ಟಾ ದಂಪತುಲು”, ಮತ್ತು “ಅಲ್ಲುಲ್ಲೊಸ್ತುನ್ನಾರು” ಸೇರಿವೆ. ಚಿರಂಜೀವಿ ಅವರು ಕೆ ವಾಸು ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. “ಪ್ರಣಮ್ ಖರೀಡು” ಮತ್ತು “ಕೊಟಾಲ ರಾಯುಡು” ಸೇರಿದಂತೆ ತಮ್ಮ ಕೆಲವು ಆರಂಭಿಕ ಚಿತ್ರಗಳನ್ನು ಕೆ.ವಾಸು ನಿರ್ದೇಶಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಕರೆಂಟ್ ಬಿಲ್ ಕಟ್ಬೇಡಿ, ಬಸ್ ಟಿಕೆಟ್ ತಗೊಳ್ಬೇಡಿ’ : ‘ಕೈ’ ಗ್ಯಾರಂಟಿ ವಿರುದ್ಧ ವಿಪಕ್ಷಗಳ ಸಮರ |Congress Guarantee
Karnataka Cabinet Expansion : ಇಂದು ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ 24 ನೂತನ ಸಚಿವರು