ಸುಭಾಷಿತ :

Tuesday, February 18 , 2020 1:52 PM

ಕಿರಿಕ್ ಬೆಡಗಿ ‘ರಶ್ಮಿಕಾ ಮಂದಣ್ಣ’ ಸಿನಿಮಾ ‘ಸಂಭಾವನೆ’ ಎಷ್ಟು ಅಂತ ಗೊತ್ತಾದ್ರೇ ನೀವು ಶಾಕ್ ಆಗೋದು ಗ್ಯಾರಂಟಿ.!


Thursday, January 16th, 2020 4:25 pm

ಬೆಂಗಳೂರು : ಟಾಲಿವುಡ್ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ಎನಿಸಿರುವ ಕನ್ನಡದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಇದೀಗ ಐಟಿ, ಇಡಿ ಶಾಕ್ ನೀಡಿದೆ. ಇದಕ್ಕೆ ಮುಖ್ಯ ಕಾರಣ, ನಟಿ ರಶ್ಮಿಕಾ ಮಂದಣ್ಣ ಲಕ್ಷ ಲಕ್ಷ ಸಿನಿಮಾಗಳಿಂದ ಸಂಭಾವನೆ ತಗೊಳ್ತಾ ಇದ್ದರೂ, ಐಟಿ ರಿಟರ್ನ್ ಗೆ ಮಾತ್ರ ತಪ್ಪು ಲೆಕ್ಕ ಕೊಡ್ತಾ ಇದ್ದರು ಎಂಬುದೇ ಆಗಿದೆ ಅಂತ ಹೇಳಲಾಗುತ್ತಿದೆ. ಹೀಗಾಗಿ ನಟಿ ರಶ್ಮಿಕಾ ಮಂದಣ್ಣ ಅವರು ಪ್ರತಿ ಸಿನಿಮಾಗಳಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಅಂತ ಕೇಳಿದ್ರೇ ನೀವು ಶಾಕ್ ಆಗ್ತೀರಿ.

ಟಾಲಿವುಡ್ ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ, ಒಂದು ಕಾಲದಲ್ಲಿ ನನ್ನ ಅಕೌಂಟ್ ನಲ್ಲಿ ಜೀರೋ ಇದೆ ಗುರು ಎಂದೇ ಹೇಳಿಕೊಂಡಿದ್ದರು. ಹೀಗೆ ಇದ್ದವರು ಕೊಡಗಿನಲ್ಲಿ ಕಾಫಿ ಎಸ್ಟೇಟ್, ಮನೆ, ದುಬಾರಿ ಕಾರು ಖರೀದಿಸಿದ್ದು ಹೇಗೆ ಖರೀದಿಸಲು ಸಾಧ್ಯವಾಯಿತು ಎಂಬುದು ಎಲ್ಲರನ್ನು ಕುತೂಹಲಕ್ಕೆ ಈಡು ಮಾಡಿತ್ತು.

ಈ ಬಗ್ಗೆ ಕೊನೆಗೂ ಸತ್ಯ ಬಯಲಾಗಿದ್ದು, ಇಂದು ನಡೆದ ಐಟಿ, ಇಡಿ ದಾಳಿಯ ಮುಖಾಂತರವಾಗಿದೆ. ಕಾರಣ, ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದಾಗ ಪಡೆದ ಸಂಭಾವನೆಯಾಗಿದೆ. ಹಾಗಿದ್ದರೇ ಅವರು ನಟಿಸಿದ ಸಿನಿಮಾಗಳಿಂದ ಪಡೆದ ಸಂಭಾವನೆ ಹೀಗಿದೆ..

ಇದು ನಟಿ ರಶ್ಮಿಕಾ ಮಂದಣ್ಣ ನಟಿಸಿದ ಚಿತ್ರಗಳಿಂದ ಪಡೆದ ಸಂಭಾವನೆ

  • ಕಿರಿಕ್ ಪಾರ್ಟಿ ಸಿನಿಮಾ ನಟನೆಗೆ ರೂ.5 ಲಕ್ಷ
  • ಚಮಕ್ ಚಿತ್ರದ ನಟನೆಗೆ ರೂ.8 ಲಕ್ಷ
  • ಅಂಜನಿಪುತ್ರ ಚಿತ್ರದ ನಟನೆಗೆ ರೂ.6 ಲಕ್ಷ
  • ಯಜಮಾನ ಚಿತ್ರದ ನಟನೆಗೆ ರೂ.18 ಲಕ್ಷ
  • ತೆಲುಗಿನ ಗೀತ ಗೋವಿಂದಂ ಚಿತ್ರದ ನಟನೆಗೆ ರೂ.40 ಲಕ್ಷ
  • ಚಲೋ ಚಿತ್ರದ ನಟನೆಗೆ ರೂ.25 ಲಕ್ಷ
  • ಪೊಗರು ಚಿತ್ರದ ನಟನೆಗೆ ರೂ.50 ಲಕ್ಷ
  • ಡಿಯರ್ ಕಾಮ್ರೆಡ್ ಚಿತ್ರದ ನಟನೆಗೆ ರೂ.25 ಲಕ್ಷ
  • ಸರಿಲೇರು ನೀಕೆವ್ವುರು ಚಿತ್ರದ ನಟನೆಗೆ ರೂ.1 ಕೋಟಿ
  • ಸುಲ್ತಾನ್ ಚಿತ್ರದ ನಟನೆಗೆ ರೂ.30 ಲಕ್ಷ

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions