ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಯೂರಿ – Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada languageFilm Sandalwood

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಯೂರಿ

ಸಿನಿಮಾ ಡೆಸ್ಕ್ : ತನ್ನ ಮುಗ್ಧ ನಟನೆ ಸ್ನಿಗ್ಧ ಚೆಲುವಿನಿಂದ ಗಮನ ಸೆಳೆಯುವ ಈ ಚೆಲುವೆ ಹೆಸರು ಮಯೂರಿ ಕ್ಯತಾರಿ. ಇದೇ ವರ್ಷ ಜೂನ್ ತಿಂಗಳಿನಲ್ಲಿ ತಮ್ಮ ಬಹುಕಾಲದ ಗೆಳೆಯ ಅರುಣ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮಯೂರಿ ಇದೀಗ ಶುಭ ವಿಚಾರವನ್ನು ತಿಳಿಸಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯ ಶುಭ ಸಮಯದಂದು ಮಯೂರಿ ಸಂತಸದ ವಿಚಾರವನ್ನು ಹೇಳಿಕೊಂಡಿದ್ದಾರೆ.

ಮಯೂರಿ ಅವರು ತಾಯಿಯಾಗಲಿದ್ದು ದೀಪಾವಳಿಯ ಶುಭಸಮಯದಂದು ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡಿರುವ ಮಯೂರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮುದ್ದು ಕಂದನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಮಯೂರಿ ಅರುಣ್ ದಂಪತಿ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿರುವ ಮಯೂರಿ ಮುಂದೆ ಬೆಳ್ಳಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ ಚೆಲುವೆ.  ಹುಬ್ಬಳ್ಳಿಯಲ್ಲಿ ಗೀತಾ ಹಾಗೂ ಪ್ರಕಾಶ್ ದಂಪತಿಗಳ ಮಗಳಾಗಿ ಜನಿಸಿದ ಮಯೂರಿ ಬಿಕಾಂ ಪದವೀಧರೆಯೂ ಹೌದು.

ತದ ನಂತರ ನಾಲ್ಕು ವರ್ಷಗಳ ಕಾಲ ನಿರೂಪಕಿಯಾಗಿ ಕೆಲಸ ಮಾಡಿರುವ ಮಯೂರಿ ಆರೂರು ಜಗದೀಶ್ ಅವರ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ನಟನಾ ಪಯಣ ಶುರುಮಾಡಿದರು. ಅಶ್ವಿನಿ ನಕ್ಷತ್ರದಲ್ಲಿ ಸೂಪರ್ ಸ್ಟಾರ್ ಜೆಕೆ ಪತ್ನಿ ಅಶ್ವಿನಿ ಆಗಿ ಅಭಿನಯಿಸಿದ್ದ ಈಕೆ ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆದರು.

ತದ ನಂತರ ಶಶಾಂಕ್ ನಿರ್ದೇಶನದ ಕೃಷ್ಣಲೀಲಾ ಸಿನಿಮಾದಲ್ಲಿ ಅಜಯ್ ರಾವ್ ಗೆ ಜೋಡಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅಶ್ವಿನಿ‌ ಅಲ್ಲೂ ಕೂಡಾ ಸೈ ಎನಿಸಿಕೊಂಡಾಕೆ. ಮೊದಲ ಸಿನಿಮಾವೇ ಶತ ದಿನ ಪೂರೈಸಿತ್ತು. ಮನೋಜ್ಞ ನಟನೆಯ ಮೂಲಕ ಸಿನಿ ಪ್ರಿಯರ ಮನ ಸೆಳೆದ ಹುಬ್ಬಳ್ಳಿ ಬೆಡಗಿ ಮಯೂರಿ ಮುಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದ ಇಷ್ಟಕಾಮ್ಯ ಚಿತ್ರದಲ್ಲಿ ನಟ ವಿಜಯ್ ಸೂರ್ಯ ಅವರಿಗೆ ನಾಯಕಿಯಾಗಿ ಅಭಿನಯಿಸಿದರು.

ಇಷ್ಟಕಾಮ್ಯದ ನಂತರ ಬೆಳ್ಳಿತೆರೆಯಲ್ಲಿಯೇ ಬ್ಯುಸಿಯಾಗಿದ್ದ ಮಯೂರಿ ಮುಂದೆ ನಟರಾಜ್ ಸರ್ವೀಸ್, ಕರಿಯ 2 , 8MM ಬುಲೆಟ್, ರುಸ್ತುಂ, ನನ್ನ ಪ್ರಕಾರ ,ಆಟಕ್ಕುಂಟು ಲೆಕ್ಕಕ್ಕಿಲ್ಲ ,ಮೌನಂ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಮಯೂರಿ ಬಣ್ಣ ಹಚ್ಚಿದ್ದಾರೆ. ಇದರ ಹೊರತಾಗಿ ಆಕೆ ಆದ್ಯಂತ ಹಾಗೂ ಪೊಗರು ಸಿನಿಮಾಗಳಲ್ಲಿ ನಟಿಸಿದ್ದು ಅದು ಬಿಡುಗಡೆಯಾಗಬೇಕಿದೆ. ಮಾತ್ರವಲ್ಲ ರ್ಯಾಂಬೋ 2 ,ಜಾನಿ ಜಾನಿ ಯಸ್ ಪಪ್ಪಾ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಯೂರಿ ಇದೀಗ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

ಪುಟ್ಟ ಕುಟುಂಬಕ್ಕೆ ಮುದ್ದು ಕಂದನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿರುವ ಮಯೂರಿ ತಾಯ್ತನವನ್ನು ಸಕತ್ ಎಂಜಾಯ್ ಮಾಡುತ್ತಿದ್ದಾರೆ.

ಅಮೃತೇಶ್ವರಿ ಕೊಳ್ಳೆಗಾಲದ ಜ್ಯೋತಿಷ್ಯರು, ಸಮಸ್ಯೆ ಏನೇ ಇರಲಿ ಎಷ್ಟೇ ಶೀಘ್ರದಲ್ಲಿ ಶಾಶ್ವತ ಪರಿಹಾರ, ಅಖಂಡ ಬಲಿಷ್ಠ ಪೂಜೆಯಿಂದ ಸ್ತ್ರೀ ಪುರುಷ ವಶೀಕರಣಕ್ಕೆ 100% ಗ್ಯಾರಂಟಿ ಪರಿಹಾರ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಪರಿಹಾರ ನೀಡಲಾಗುವುದು.  ಇಂದೇ ಕರೆಮಾಡಿ  ಮಣಿಕಂಠಾಚಾರಿ ಗುರೂಜಿ ಕೊಳ್ಳೆಗಾಲ 9972930637error: ಕದಿಯೋದು ಬಿಟ್ಟು ಸ್ವಂತವಾಗಿ ಬರೆಯೋದು ಕಲಿಯಿರಿ