ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೊಣಚ್ಚ ತಾಯಿಯಾಗುತ್ತಿದ್ದಾರೆ. ಹರ್ಷಿಕಾ ಪೊಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಬಗ್ಗೆ ತಮ್ಮ ಪೋಟೋ ಶೂಟ್ ಮಾಡಿರುವಂತ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ನಟಿ ಹರ್ಷಿಕಾ ಪೊಣಚ್ಚ ಅವರು ಐದು ತಿಂಗಳ ಗರ್ಭಿಣಿಯಾಗಿದದಾರೆ. ಈ ಖುಷಿ ವಿಚಾರವನ್ನ ವಿಭಿನ್ನ ರೀತಿಯಲ್ಲಿ ಪೋಟೋ ಶೂಟ್ ಮಾಡಿದಂತ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ಅಂದಹಾಗೇ ನಟಿ ಹರ್ಷಿಕಾ ಹಾಗೂ ಭುವನ್ ಅನೇಕ ವರ್ಷಗಳ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ಆಗಸ್ಟ್.24, 2023ರಂದು ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿದ್ದಾರೆ.

ಮುಡಾದಲ್ಲಿ 4,000 ಕೋಟಿ ರೂ. ಗುಳುಂ ಮಾಡಿದ ʻಗೋಲ್ಮಾಲ್‌ CMʼ : ಆರ್.‌ ಅಶೋಕ್‌ ಗಂಭೀರ ಆರೋಪ

ಹಿಂದೂ ವಿರೋಧಿ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ ರಾಹುಲ್ ಗಾಂಧಿ

Share.
Exit mobile version