ನವದೆಹಲಿ : ‘ಅನುಪಮಾ’ ಧಾರಾವಾಹಿಯ ನಟ ನಿತೀಶ್ ಪಾಂಡೆ ತಮ್ಮ 51 ನೇ ವಯಸ್ಸಿನಲ್ಲಿ ನಿಧನರಾದರು. ಮೇ 23ರ ಮಂಗಳವಾರ ನಿತೀಶ್ ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ವರದಿಗಳ ಪ್ರಕಾರ, ನಾಸಿಕ್ ಬಳಿಯ ಇಗತ್ಪುರಿಯಲ್ಲಿ ತಡರಾತ್ರಿ ನಟನಿಗೆ ತೀವ್ರ ಹೃದಯ ಸ್ತಂಭನವಾಗಿದೆ ಅಂತ ಕುಟುಂಬ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಉತ್ತರಾಖಂಡದ ಅಲ್ಮೋರಾ ಕುಮಾವೂನ್ ಮೂಲದ ನಿತೇಶ್ ನಟಿ ಅರ್ಪಿತಾ ಪಾಂಡೆ ಅವರನ್ನು ವಿವಾಹವಾದರು. ಅವರು 2003ರಲ್ಲಿ ವಿವಾಹವಾದರು. ನಿತೇಶ್ ಈ ಹಿಂದೆ ನಟಿ ಅಶ್ವಿನಿ ಕಲ್ಸೇಕರ್ ಅವರನ್ನು ವಿವಾಹವಾಗಿದ್ದರು.