ಬೆಂಗಳೂರು : ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ನಡುವಿನ ಅಫೇರ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವುದು ಗೊತ್ತೇ ಇದೆ. ಈ ಬೆನ್ನಲ್ಲೆ ಇದೀಗ ನರೇಶ್ ಜೊತೆ ಪವಿತ್ರಾ ಲೋಕೇಶ್ ಸಪ್ತಪದಿ ತುಳಿದ ವಿಡಿಯೋ ಹಂಚಿಕೊಂಡಿದ್ದು, ಆಶೀರ್ವಾದ ಮಾಡುವಂತೆ ತಮ್ಕ ಅಭಿಮಾನಿಗಳಲ್ಲಿ ಕೋರಿದ್ದಾರೆ. ಇದೀಗ ಮದುವೆಯಾಗಿದ್ದಾರೆ ಅನ್ನುವ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ನಡುವಿನ ಅಫೇರ್ ವಿಚಾರವಾಗಿ ನರೇಶ್ ಹಾಗೂ ಅವರ ಪತ್ನಿ ರಮ್ಯಾ ಭಾರೀ ಗಲಾಟೆಗೆ ನಡೆಸಿದ್ದರು. ಈ ಗಲಾಟೆ ತಣ್ಣಗಾಗುತ್ತಿದ್ದಂತೆ ಇದೀಗ ಮತ್ತೊಂದು ಮದುವೆಯ ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋಗೆ ನರೇಶ್ ಶೀಷೀಕೆಗಳನ್ನು ಬರೆದುಕೊಂಡಿದ್ದು, ನಮ್ಮ ಈ ಹೊಸ ಪ್ರಯಾಣದಲ್ಲಿ ಶಾಂತಿ ಮತ್ತು ಸಂತೋಷದ ಜೀವನಕ್ಕಾಗಿ ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ. ಒಂದು ಪವಿತ್ರ ಬಂಧ. ಎರಡು ಮನಸ್ಸುಗಳು, ಏಳು ಹೆಜ್ಜೆಗಳು ಎಂದು ನಿಮ್ಮ ಪವಿತ್ರಾ ನರೇಶ್’ ಎಂದು ನರೇಶ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಬಹುತೇಕ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನು ಹಾರೈಸಿದ್ದಾರೆ.
Seeking your blessings for a life time of peace & joy in this new journey of us🤗
ఒక పవిత్ర బంధం
రెండు మనసులు
మూడు ముళ్ళు
ఏడు అడుగులు 🙏మీ ఆశీస్సులు కోరుకుంటూ ఇట్లు
– మీ #PavitraNaresh ❤️ pic.twitter.com/f26dgXXl6g— H.E Dr Naresh VK actor (@ItsActorNaresh) March 10, 2023
Congrats Naresh garu. Happy married life. Ila cheskuntarani expect cheyaledu.
— SSMB fan (@OkkadiFanIkada) March 10, 2023