ಸುಭಾಷಿತ :

Monday, February 17 , 2020 10:48 PM

BREAKING : ನಟ ದುನಿಯಾ ವಿಜಯ್ ಗೆ ಎದುರಾಯ್ತು ಸಂಕಷ್ಟ : ‘ತಲ್ವಾರ್’ನಿಂದ ಕೇಕ್ ಕತ್ತರಿಸಿದ್ದಕ್ಕಾಗಿ ಎಫ್ಐಅರ್ ದಾಖಲು


Thursday, January 23rd, 2020 3:04 pm

ಬೆಂಗಳೂರು : ಕಳೆದ ಇತ್ತೀಚೆಗೆ ತಮ್ಮ ಹುಟ್ಟು ಹಬ್ಬದಂದು ತಲ್ವಾರ್ ನಿಂದ ನಟ ದುನಿಯಾ ವಿಜಯ್ ಕೇಕ್ ಕತ್ತರಿಸಿ, ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ, ಟೀಕೆ ಕೇಳಿಬಂದಿತ್ತು. ಇದೀಗ ನಟ ದುನಿಯಾ ವಿಜಯ್ ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಕ್ಕೆ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ಮೂಲಕ ಮತ್ತೊಂದು ಸಂಕಷ್ಟ ನಟ ದುನಿಯಾ ವಿಜಯ್ ಗೆ ಎದುರಾಗಿದೆ.

ನಟ ದುನಿಯಾ ವಿಜಯ್ ಅವರು ಕಳೆದ ಇತ್ತೀಚಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಕೇಕ್ ಅನ್ನು ಅಭಿಮಾನಿಗಳು ನೀಡಿದ ತಲ್ವಾರ್ ನಿಂದ ಕಟ್ ಮಾಡಿದ್ದರು. ಇದು ಎಲ್ಲರ ಕೆಂಗಣ್ಣಿಗೆ, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಸಂಬಂಧ ನಟ ದುನಿಯಾ ವಿಜಯ್ ಆ ದಿನವೇ ಅಭಿಮಾನಿಗಳು ನೀಡಿದ ತಲ್ವಾರ್ ನಿಂದ ಕೇಕ್ ಕಟ್ ಮಾಡಲಾಗಿತ್ತು. ಅದರ ಹೊರತಾಗಿ ಯಾವುದೇ ದುರುದ್ದೇಶ ಇರಲಿಲ್ಲ ಎಂಬುದಾಗಿ ಹೇಳಿದ್ದರು. ಜೊತೆಗೆ ಸಾರ್ವಜನಿಕರ ಕ್ಷಮೆಯನ್ನು ಕೋರಿದ್ದರು.

ಈ ಎಲ್ಲಾ ಘಟನೆಯ ಬಳಿಕ, ಇದೀಗ ಗಿರಿನಗರ ಪೊಲೀಸರು ನಟ ದುನಿಯಾ ವಿಜಯ್ ತಲ್ವಾರ್ ನಿಂದ ಕೇಕ್ ಕಟ್ ಮಾಡಿದ್ದ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 283ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಟ ದುನಿಯಾ ವಿಜಯ್ ಅವರಿಗೆ ವಿಜಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಇದೀಗ ನಟ ದುನಿಯಾ ವಿಜಯ್ ಗೆ ಸಂಕಷ್ಟ ಎದುರಾಗಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions