ಮಂಡ್ಯ: ಜಿಲ್ಲೆಯಲ್ಲಿ ನಟ ದರ್ಶನ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಇಂದು ನಟ ದರ್ಶನ್ ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಆದ್ರೇ ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಅಗ್ರಹಾರ ಬಾಚನಹಳ್ಳಿ ಬಳಿಯಲ್ಲಿ ಇಂದು ನಟ ದರ್ಶನ್ ಪ್ರಚಾರದಲ್ಲಿ ತೊಡಗಿದ್ದರು. ಪ್ರಚಾರದ ವಾಹನದ ವೇಗವಾಗಿ ಮುಂದೆ ಸಾಗುತ್ತಿದ್ದಾಗ ದಿಢೀರ್ ವಿದ್ಯುತ್ ತಂತಿ ಸ್ಪರ್ಶಿಸಿದೆ.

ನಟ ದರ್ಶನ್ ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದ್ರೂ ವಿದ್ಯುತ್ ತಂತಿ ಕೂಡಲೇ ತುಂಡಾಗಿ ಬಿದ್ದಿದ್ದರಿಂದ ಮುಂದಾಗಲಿದ್ದಂತ ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.

ಈ ಘಟನೆಯಲ್ಲಿ ನಟ ದರ್ಶನ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣವಿತ್ತು. ಈ ಘಟನೆಯ ಬಳಿಕ ನಟ ದರ್ಶನ್ ಲೋಕಸಭಾ ಚುನಾವಣಾ ಪ್ರಚಾರ ಮೊಟಕುಗೊಳಿಸಿ, ಬೆಂಗಳೂರಿಗೆ ತೆರಳಿದ್ರು ಎಂಬುದಾಗಿ ತಿಳಿದು ಬಂದಿದೆ.

ವರದಿ: ಗಿರೀಶ್ ರಾಜ್, ಮಂಡ್ಯ

ಹೆಣದ ಮೇಲೆ ಯಾರು ರಾಜಕಾರಣ ಮಾಡಬಾರದು, ನೇಹಾ ಹಂತಕನಿಗೆ ಗಲ್ಲು ಶಿಕ್ಷೆಯಾಗಲಿ : ಶಾಸಕ ಪ್ರಸಾದ್ ಅಬ್ಬಯ್ಯ

‘ನಕ್ಷತ್ರಗಳಿಗೆ ರಾಕೆಟ್ ಕಳುಹಿಸಿ’ : ಇರಾನ್ ಮೇಲೆ ಇಸ್ರೇಲ್ ಡ್ರೋನ್ ದಾಳಿ ನಂತ್ರ ‘ಎಲೋನ್ ಮಸ್ಕ್’ ರಹಸ್ಯ ಸಂದೇಶ

Share.
Exit mobile version