ಮೈಸೂರು : ಚಿತ್ರುದರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ನಟ ದರ್ಶನ್‌ ವಿರುದ್ಧ ಇದೀಗ ಮತ್ತೊಂದು ಹಳೆಯ ಪ್ರಕರಣದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.

ಮೈಸೂರು ಜಿಲ್ಲೆಯ ಟಿ. ನರಸೀಪುರ ಫಾರ್ಮ್‌ ಹೌಸ್‌ ನಲ್ಲಿ ನಟ ದರ್ಸನ್‌ ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಪಕ್ಷಿ ಸಾಕಿದ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿ ಚಾರ್ಜ್‌ ಶೀಟ್‌ ಸಲ್ಲಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ನಟ ದರ್ಶನ್‌ A2 , ಪತ್ನಿ ವಿಜಯಕ್ಷ್ಮಿ A1  ಆರೋಪಿಯಾಗಿರುವ ಈ ಪ್ರಕರಣದಲ್ಲಿ ನೋಟಿಸ್‌ ನೀಡಿದ್ರೂ ವಿಚಾರಣೆಗೆ ಹಾಜರಾಗಿಲ್ಲ. ಪ್ರಕರಣದಲ್ಲಿ ಪ್ರಾಪರ್ಟಿ ಮ್ಯಾನಜರ್‌ ನಾಗರಾಜ್‌ ಎಂಬುವರು ಮಾತ್ರ ವಿಚಾರಣೆ ಹಾಜರಾಗಿದ್ದರು. ಆದರೆ ದರ್ಶನ್‌ ಮತ್ತು ಪತ್ನಿ ವಿಜಯಲಕ್ಷ್ಮಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ತನಿಖೆ ಪೂರ್ಣಗೊಳಿಸಿ ಚಾರ್ಜ್‌ ಶೀಟ್‌ ಸಲ್ಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

Share.
Exit mobile version