ಸುಭಾಷಿತ :

Tuesday, April 7 , 2020 6:59 PM

ಹುಟ್ಟು ಹಬ್ಬದ ದಿನದಂದು ಎಲ್ಲರಿಗೂ ಮಾದರಿಯಾದ ‘ಚಾಲೆಂಜಿಂಗ್ ಸ್ಟಾರ್ ದರ್ಶನ್’


Sunday, February 16th, 2020 4:43 pm

ಸಿನಿಮಾ ಡೆಸ್ಕ್ : ಬಹುತೇಕ ಸ್ಯಾಂಡಲ್ ವುಡ್ ಚಿತ್ರರಂಗದ ನಾಯಕ ನಟರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಕೇಕ್ ಕಟ್ ಮಾಡಿ, ಅಭಿಮಾನಿಗಳೊಂದಿಗೆ ಸಂಭ್ರಮಿಸುವ ಮೂಲಕ. ಆದ್ರೇ ಇದಕ್ಕೆ ಡಿಫೆರೆಂಟ್ ಅನಿಸಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ. ಅದು ಇಂದು ಆಚರಿಸಿಕೊಂಡ ಅವರ ಹುಟ್ಟು ಹಬ್ಬದ ಮೂಲಕ. ಅಲ್ಲದೇ ಈ ಮೂಲಕ ಎಲ್ಲರಿಗೂ ಹುಟ್ಟು ಹಬ್ಬದ ದಿನದಂದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲರಿಗೂ ಮಾದರಿಯಾಗುವಂತೆ ಮಾಡಿತು.

ಹೌದು.. ಚಾಲೆಂಜಿಂಗ್ ಸ್ಟಾರ್ ದರ್ಶನ್, ಇಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಡಿಫೆರೆಟ್.. ಅಭಿಮಾನಿಗಳಿಗೆ ಸಾರಿದ ಸಂದೇಶ ಕೂಡ ಮಾದರಿಯಾಗುವಂತದ್ದು. ಆ ಮಾದರಿಯಾಗುವ ನಡೆಯೇ, ಕೇಕ್ ಕಟ್ ಮಾಡೋದನ್ನು ನಿಲ್ಲಿಸಿ, ಬಡವರಿಗೆ, ಅನಾಥಾಶ್ರಮಗಳಿಗೆ ಸಹಾಯ ಆಗುವಂತೆ ಆಹಾರ ಪದಾರ್ಥಗಳನ್ನು ತಮ್ಮ ಹುಟ್ಟು ಹಬ್ಬದಂದು ನೀಡಿ ಎಂದು ಸಾರಿದ್ದು. ಅಲ್ಲದೇ ನನ್ನ ಹುಟ್ಟು ಹಬ್ಬಕ್ಕೆ ಕೇಕ್ ತರಬೇಡಿ. ನಿಮ್ಮ ಕೈಲಾದ್ರೇ ಅಕ್ಕಿ, ಎಣ್ಣೆ, ಬೇಳೆ ಸೇರಿದಂತೆ ವಿವಿಧ ಸಾಮಾಗ್ರಿ ತನ್ನಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದು.

ಹೀಗೆ ಅಭಿಮಾನಿಗಳಿಗೆ ಕರೆ ನೀಡಿದ್ದೇ ತಡ, ಕಳೆದ ರಾತ್ರಿಯಿಂದಲೇ ಅವರ ಮನೆಯ ಮುಂದೆ ಕ್ಯೂ ನಿಂತ ಅವರ ಅಪಾರ ಅಭಿಮಾನಿಗಳು, ಅವರು ಹೇಳಿದಂತೆ ಅವರ ಕೈಲಾದಷ್ಟು ಅಕ್ಕಿ, ಬೇಳೆ, ಎಣ್ಣೆ, ಬೆಲ್ಲ ಸೇರಿದಂತೆ ವಿವಿಧ ಆಹಾರ ಧಾನ್ಯಗಳನ್ನು ಹುಟ್ಟು ಹಬ್ಬಕ್ಕೆ ದರ್ಶನ್ ಅವರಿಗೆ ಶುಭಾಶಯ ಕೋರಿ ಗಿಫ್ಟ್ ಆಗಿ ನೀಡಿದ್ರು. ಇದನ್ನು ಸಂತೋಷದಿಂದಲೇ ಸ್ವೀಕರಿಸಿದ ದರ್ಶನ್, ಎಲ್ಲರಿಗೂ ಧನ್ಯತೆಯ ಕೃತಜ್ಞತೆಯನ್ನು ಸಲ್ಲಿಸಿದ್ರು.

ಅವರ ಹುಟ್ಟು ಹಬ್ಬಕ್ಕೆ ಹೀಗೆ ಉಡುಗೋರೆಯಾಗಿ ಬಂದಂತ ಅನೇಕ ಆಹಾರ ಧಾನ್ಯಗಳನ್ನು, ಅವರ ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಂತ ವಸ್ತುಗಳನ್ನು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ನೀಡಲಿದ್ದಾರೆ. ಈ ಮೂಲಕ ಹುಟ್ಟು ಹಬ್ಬದ ದಿನದಂದು ನಟ ದರ್ಶನ್ ಎಲ್ಲರಿಗೂ ಮಾದರಿಯಾಗುವಂತೆ ಆಚರಿಸಿಕೊಂಡು, ಒಳ್ಳೆಯ ಸಂದೇಶವನ್ನು ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಹಂಚಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions