ಕೊರೊನಾ ಹಿನ್ನೆಲೆ ಅಮೆರಿಕನ್ ಪ್ರಜೆಗಳನ್ನು ವಾಪಾಸ್ ಕಳುಹಿಸದ ರಾಷ್ಟ್ರಗಳ ವಿರುದ್ಧ ಕ್ರಮ : ವೀಸಾ ನಿರ್ಬಂಧಕ್ಕೆ ಮುಂದಾದ ಟ್ರಂಪ್ – Kannada News Now


World

ಕೊರೊನಾ ಹಿನ್ನೆಲೆ ಅಮೆರಿಕನ್ ಪ್ರಜೆಗಳನ್ನು ವಾಪಾಸ್ ಕಳುಹಿಸದ ರಾಷ್ಟ್ರಗಳ ವಿರುದ್ಧ ಕ್ರಮ : ವೀಸಾ ನಿರ್ಬಂಧಕ್ಕೆ ಮುಂದಾದ ಟ್ರಂಪ್

 

ವಾಷಿಂಗ್ಟನ್ : ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ನಾಗರಿಕರನ್ನು ವಾಪಾಸ್ ಕಳುಹಿಸಲು ನಿರಾಕರಿಸಿರುವ ದೇಶಗಳ ವಿರುದ್ಧ ಅಮೆರಿಕ ಕ್ರಮಕ್ಕೆ ಮುಂದಾಗಿದೆ. ಅಲ್ಲದೇ, ಆ ದೇಶಗಳ ವೀಸಾ ನಿರಾಕರಿಸುವ ಎಚ್ಚರಿಕೆ ನೀಡಿದ್ದಾರೆ.

ವೀಸಾ ನಿರ್ಬಂಧಗಳ ಕುರಿತು ಜ್ಞಾಪಕ ಪತ್ರವನ್ನು ಹೊರಡಿಸುವ ಮೂಲಕ ಎಚ್ಚರಿಕೆ ನೀಡಿರುವ ಟ್ರಂಪ್, “ಈ ಹೊಸ ನಿಯಮ ತಕ್ಷಣದಿಂದಲೇ ಜಾರಿಯಾಗಿ ಈ ವರ್ಷದ ಡಿಸೆಂಬರ್ 31 ರವರೆಗೆ ಅನ್ವಯವಾಗಲಿದೆ. ಇತರೆ ದೇಶಗಳು ನಮ್ಮ ನಾಗರಿಕರನ್ನು ನಮ್ಮ ದೇಶಕ್ಕೆ ವಾಪಾಸ್ ಕಳಿಸಲು ನಿರಾಕರಿಸುವುದು ಅಥವಾ ವಿಳಂಭಗೊಳಿಸುವುದು ಅಮೆರಿಕನ್ನರಿಗೆ ಸ್ವೀಕಾರಾರ್ಹವಲ್ಲ. ಅಲ್ಲದೆ, ಇದು ಸಾರ್ವಜನಿಕ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ಪರಿಗಣಿಸಬೇಕಾಗುತ್ತದೆ” ಎಂದು ಟ್ರಂಪ್ ಖಡಕ್ ಸಂದೇಶ ನೀಡಿದ್ದಾರೆ….