ಆರ್ಮಿಗೆ ಹೋಗಬೇಕಾದ ಮಂನ್ಸೋರೆ ಕುಂಚದಲ್ಲಿ ಅರಳಿದ ಆಕ್ಟ್ 1978 – Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada languageFilm Sandalwood

ಆರ್ಮಿಗೆ ಹೋಗಬೇಕಾದ ಮಂನ್ಸೋರೆ ಕುಂಚದಲ್ಲಿ ಅರಳಿದ ಆಕ್ಟ್ 1978

ಬೆಂಗಳೂರು: ಸದ್ಯ ಯಾರ ಬಾಯಲ್ಲಿ ಕೇಳುದ್ರು ಆಕ್ಟ್ 1978 ಸಿನಿಮಾದ ಬಗ್ಗೆಯೇ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದ ನಿರ್ದೇಶಕರ ಹೆಸರು ಕೇಳಿದಾಕ್ಷಣವೇ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ ಸಿನಿಮಾ ಪೋಸ್ಟರ್, ಟ್ರೇಲರ್ ನೋಡಿ ನಿರೀಕ್ಷೆ ಎಂದಿಗು ಸುಳ್ಳಾಗಲ್ಲ ಎಂಬುದು ಗೊತ್ತಾಗಿದೆ. ಆದ್ರೆ ಮಂನ್ಸೋರೆ ಯಾಕೆ ಇಂತ ಸಿನಿಮಾಗಳನ್ನೇ ಮಾಡ್ತಾರೆ..? ಅವರ್ಯಾಕೆ ಕಮರ್ಷಿಯಲ್ ಸಿನಿಮಾಗಳಿಗೆ ಹೋಗಿಲ್ಲ..? ಅನ್ನೋ ಹಲವು ಪ್ರಶ್ನೆಗಳು ನಮ್ಮ ಮನಸ್ಸಲ್ಲಿ ಹಾಗೇ ಉಳಿದಿವೆ.

ಮಂನ್ಸೋರೆ ಅಂದ್ರೆ ಎಲ್ಲರು ನೋಡಿದ ಹಾಗೇ ತುಂಬಾ ಸೈಲೆಂಟ್ ವ್ಯಕ್ತಿ. ಅವರಿಗೆ ಮಾತಲ್ಲಿ ಯಾವತ್ತು ಸೌಂಡ್ ಮಾಡಿಲ್ಲ. ಆದ್ರೆ ಅವರ ಕೃತಿಗಳಲ್ಲಿ ಆಗುವ ಸೌಂಡ್ ಪಟಾಕಿಗಿಂತ ಹೆಚ್ಚು. ಸಂಕೋಚದ ವ್ಯಕ್ತಿ ಎಂಬ ಆಪಾದನೆ ಅವರ ಮೇಲಿದೆ. ಆದ್ರೆ ಅವರ ಸಿನಿಮಾಗಳು ಆ ಆಪಾದನೆಗೆ ವಿರುದ್ಧವಾಗಿರುತ್ತವೆ. ಈಗಾಗಲೇ ಅವರ ಸಿನಿಮಾಗಳನ್ನ ನಾವೂ ನೋಡಿದ್ದೀವಿ ಹರಿವು, ನಾತಿಚರಾಮಿ ಸಿನಿಮಾಗಳು ಈಗಲೂ ಎಲ್ಲರ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿವೆ. ಮತ್ತೆ ಮತ್ತೆ ನೋಡಿದರು ಸಿನಿಮಾದ ಬಗ್ಗೆ ಬೇಸರ ಮೂಡಿಸಲ್ಲ, ಅದೇ ಫ್ರೆಶ್ ನೆಸ್ ಕೊಡುತ್ತೆ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ಆಕ್ಟ್ 1978 ಸಿನಿಮಾ ಅವರ ಮೂರನೇ ಸಿನಿಮಾ.

ಒಬ್ಬ ವ್ಯಕ್ತಿ ಕೇವಲ ಎರಡೇ ಸಿನಿಮಾಗಳಿಗೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳಿತಾನಾ ಅನ್ನೋದಕ್ಕೆ ಮಂನ್ಸೋರೆ ಉದಾಹರಣೆ. ಕಲೆ ತಲೆ ಎರಡು ಇದ್ರೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಮೊದಲ ಸಿನಿಮಾದಲ್ಲೇ ಗೆದ್ದ ಮಂನ್ಸೋರೆ, ಡೈರೆಕ್ಟರ್ ಎಂದರೆ ಹೀಗಿರಬೇಕು ಎಂಬಷ್ಟು ಎತ್ತರಕ್ಕೆ ಬೆಳೆದರು. ಆದ್ರೆ ಮೂರನೇ ಸಿನಿಮಾದಲ್ಲೂ ಅವರು ಕಮರ್ಷಿಯಲ್ ಹ್ಯಾಂಗಲ್ ಹೋಗಿಲ್ಲ. ಯಾಕಂದ್ರೆ ಅವರೇ ಹೇಳಿಕೊಂಡಂತೆ ರೆಗ್ಯೂಲರ್ ಕಮರ್ಷಿಯಲ್ ಗೆ ಕೈ ಹಾಕೋದಕ್ಕೆ ಅವರಿಗೆ ಇಷ್ಟವಿಲ್ಲವಂತೆ. ಬದಲಿಗೆ ಒಂದು ಸಿನಿಮಾ ಮಾಡುವಾಗ ನಿರ್ಮಾಪಕರಿಗೆ ನಷ್ಟವಾಗದಂತೆ ನೋಡಿಕೊಳ್ಳುವಷ್ಟು ಮಾತ್ರ ಕಮರ್ಷಿಯಲ್ ಹ್ಯಾಂಗಲ್ ಥಿಂಕ್ ಮಾಡುತ್ತಾರೆ. ಕಂಪ್ಲೀಟ್ ಕಮರ್ಷಿಯಲ್ ಹ್ಯಾಂಗಲ್ ಗೆ ಹೋಗುವಷ್ಟು ಮನಸ್ಸಿಲ್ಲ ಎಂಬುದು ಅವರ ಅಭಿಪ್ರಾಯ.

ಜೊತೆಗೆ ಅವರು ಸಿನಿಮಾಗಳನ್ನ ಮಾಡುವುದೇ ವಿಭಿನ್ನ. ಅವರ ವರ್ಕ್ ಮಾಡುವ ರೀತಿ, ಕಥೆ ಆಯ್ದುಕೊಳ್ಳುವ ರೀತಿಯಿಂದಲೇ ಪ್ರೇಕ್ಷಕರು ಮೂರು ಗಂಟೆಗಳ ಕಾಲ ಥಿಯೇಟರ್ ಛೇರ್ ಮೇಲೆ ಕೂರುವಂತೆ ಮಾಡುತ್ತದೆ. ಅವರ ಜೀವನದಲ್ಲಿ ನಡೆದ ಘಟನೆ, ಇತಿಹಾಸ, ಓದಿದ ಪುಸ್ತಕಗಲ ಮೇಲೆ ಕತೆ ಬರೆದು ಸಿನಿಮಾ ನಿರ್ದೇಶಿಸುವ ಅವರ ಸಾಮರ್ಥಕ್ಕೆ ಅಭಿಮಾನಿಗಳ ಸಂಕ್ಯ ಅಂತು ಹೆಚ್ಚುತ್ತಲೆ ಇದೆ. ಮಂನ್ಸೋರೆ ನಿರ್ದೇಶಕರಾಗಬೇಕು ಅಂತ ಬಂದವರಲ್ಲ ಏನೋ ಮಾಡಲು ಹೋಗಿ, ನಾನಾ ಕಾಲೇಜುಗಳನ್ನ ಬಾಗಿಲು ತಟ್ಟಿ ಕೊನೆಗೆ ಚಿತ್ರಕಲಾ ಪರಿಷತ್ ನಿಂದ ಸಿನಿಮಾಗೆ ಬಂದವರು ಇಂದು ಫುಲ್ ಟಾಫ್ ಡೈರೆಕ್ಟರ್. ಸದ್ಯ ಆಕ್ಟ್ 1978 ಎಂಬ ಅದ್ಭುತ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದೇ ತಿಂಗಳ 20 ರಂದು ಥಿಯೇಟರ್ ಗೆ ಬರಲು ಸಿದ್ಧವಾಗಿದೆ. ಎಲ್ಲರೂ ಕಾಯುತ್ತಿರುವ ಸಿನಿಮಾ ಕೂಡ ಇದೆ ಆಗಿದೆ. ಆ್ಯಕ್ಟ್ 1978 ಚಿತ್ರವನ್ನ ಮಂಸೋರೆ ನಿರ್ದೇಶನ ಮಾಡಿದ್ದು, ದೇವರಾಜ್ ಆರ್ ಬಂಡವಾಳ ಹೂಡಿದ್ದಾರೆ. ಯಜ್ಞ ಶೆಟ್ಟಿ, ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶೋಭರಾಜ್, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಯಾನಂದ್ ಟಿ ಕೆ, ವೀರು ಮಲ್ಲಣ್ಣ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.error: ಕದಿಯೋದು ಬಿಟ್ಟು ಸ್ವಂತವಾಗಿ ಬರೆಯೋದು ಕಲಿಯಿರಿ