ಸುಭಾಷಿತ :

Tuesday, February 18 , 2020 1:49 PM

ಬ್ಯಾನ್…ಬ್ಯಾನ್…ಬ್ಯಾನ್. : ಈ ರಾಜ್ಯದಲ್ಲಿ ಅಕ್ರಮ ‘ಆ್ಯಸಿಡ್’ ಮಾರಾಟಕ್ಕೆ ಬೀಳಲಿದೆ ಬ್ರೇಕ್…?


Friday, January 17th, 2020 7:52 pm

ಭೋಪಾಲ್ :  ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಚಫಾಕ್ ಸಿನಿಮಾದಿಂದ ಪ್ರೇರಣೆಗೊಂಡ ಮಧ್ಯಪ್ರದೇಶ ಸರ್ಕಾರ ರಾಜ್ಯದಲ್ಲಿ ಅಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ ಆರಂಭಿಸಿದೆ,

ಯೆಸ್, ಬಗ್ಗೆ ಸ್ವತಃ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಅಕ್ರಮ ಆ್ಯಸಿಡ್ ಮಾರಾಟವನ್ನು ತಡೆಯಬೇಕು, ಇದು ಬಹಳ ಮುಖ್ಯವಾದ ವಿಷಯವಾಗಿದೆ, . ಇನ್ನೂ ಆ್ಯಸಿಡ್ ದಾಳಿಗಳನ್ನು ಸಹಿಸಿಕೊಳ್ಳಲು ಆಗಲ್ಲ. ರಾಜ್ಯಾದ್ಯಂತ ಈ ವಿರುದ್ಧ ಅಭಿಯಾನ ನಡೆಸಲು ಈಗಾಗಲೇ ಸೂಚಿಸಲಾಗಿದೆ. ಆ್ಯಸಿಡ್ ದಾಳಿ ಅನಾಗರಿಕತೆ, ಕ್ರೌರ್ಯತೆಯ ಸುಳಿವು. ಇದನ್ನು ನಾವು ಮಟ್ಟಹಾಕಬೇಕು ಎಂದಿದ್ದಾರೆ.

ಚಪಾಕ್ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದು, ಆಸಿಡ್ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಅವರ ಬದುಕಿನ ಕಥೆಯಾಧಾರಿತ ಚಿತ್ರವಾಗಿದೆ., ದೀಪಿಕಾ, ಮೇಘನಾ ಗುಲ್ಜಾರ್ ನಿರ್ದೇಶನದ ಚಪಾಕ್ ಚಿತ್ರಕ್ಕೆ ದೀಪಿಕಾ ಅವರು ಸಹ ಫಾಕ್ಸ್ ಸ್ಟಾರ್ ಸ್ಟುಡಿಯೊ ಜೊತೆ ಬಂಡವಾಳ ಹೂಡಿದ್ದಾರೆ. ಲಕ್ಷ್ಮಿ ಅಗರ್ವಾಲ್ 15 ವರ್ಷದ ಹುಡುಗಿಯಾಗಿದ್ದಾಗ ಪರಿಚಯದ 32 ವರ್ಷದ ವ್ಯಕ್ತಿಯಿಂದ ಆಸಿಡ್ ದಾಳಿಗೊಳಗಾಗಿದ್ದರು. ನಂತರ ಲಕ್ಷ್ಮಿ ಆಸಿಡ್ ಸಂತ್ರಸ್ತರ ಬದುಕಿಗಾಗಿ ಮತ್ತು ಅಂತಹ ದಾಳಿಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಫಾಕ್ ಸಿನಿಮಾದಿಂದ ಪ್ರೇರಣೆಗೊಂಡ ಮಧ್ಯಪ್ರದೇಶ ಸರ್ಕಾರ ರಾಜ್ಯದಲ್ಲಿ ಅಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ ಆರಂಭಿಸಿದೆ.

.ಅಲ್ಲದೇ ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ  ಅಂಗಡಿಗಳಲ್ಲಿ ಬೇಕಾಬಿಟ್ಟಿ ಆ್ಯಸಿಡ್ ಮಾರಾಟ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ಸ್ಟಿಂಗ್ ಆಪರೇಷನ್ ನಡೆಸಿ 24 ಆ್ಯಸಿಡ್ ಬಾಟಲಿಗಳನ್ನು ಖರೀಸಿ ಅಕ್ರಮ ಆ್ಯಸಿಡ್ ಮಾರಾಟದ ಬಗ್ಗೆ ತಿಳಿಸಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions