ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ 

ಚಾಮರಾಜನಗರ: ಚಾಮರಾಜನಗರದಲ್ಲಿ ಇತ್ತೀಚಿಗೆ ನಡೆದ ಪೋಲಿಸರ ಮೇಲಿನ ಹಲ್ಲೆ ಪ್ರಕರಣದಲ್ಲಿ ಕೊನೆಗೂ ಅರೋಪಿಗಳನ್ನು ಬಂಧಿಸಿ ಹೆಡೆಮುರಿಕಟ್ಟುವಲ್ಲಿ ಜಿಲ್ಲಾ ಪೋಲಿಸರು ಯಶಸ್ವಿಯಾಗಿದ್ದಾರೆ. ಗಲಾಟೆ ನಡೆದ ಬಳಿಕ ಕೂಡ ಪೋಲಿಸರು ಸುಮ್ಮನಾಗಿದ್ದರು. ಖುದ್ದು ಗಾಯಗೊಂಡಿದ್ದ ಎಸ್‌ಎಸ್‌ಐ ಕೂಡ ನೋವಿನಿಂದ ತಮ್ಮ ಇಲಾಖೆಯಿಂದ ಆಗಿದ್ದ ಅವಮಾನಕ್ಕೆ ಬೇಸತ್ತು ಮೌನಕ್ಕೆ ಶರಣಾಗಿದ್ದರು.

 ಈ ನಡುವೆ ಪೋಲಿಸರ ಕಾರ್ಯವೈಖರಿ ಬಗ್ಗೆ ಕನ್ನಡ ನ್ಯೂಸ್‌ ನೌ ಚಾಮರಾಜನಗರ ಪ್ರತಿನಿಧಿ ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಅವರು ಪ್ರಕರಣ ಸಂಬಂಧ ವರದಿಯನ್ನು ಮಾಡಿದ್ದರು, ವರದಿಯನ್ನು ಗಮನಿಸಿರುವ ಎಡಿಜಿಪಿ ಅಲೋಕ್ ಕುಮಾರ್‌ ಅವರು ಜಿಲ್ಲಾ ಪೋಲಿಸ್‌ ಎಸ್‌ಪಿಗೆ ಹಾಗೂ ಸಂಬಂಧಪಟ್ಟ ಪೋಲಿಸ್‌ ಅಧಿಕಾರಿಗಳಿಗೆ ಚಳಿ ಬಿಡಿಸಿ, ಪ್ರಕರಣ ಸಂಬಂಧ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಇಲಾಖೆಯ ಕಾನೂನು ಅಡಿಯಲ್ಲಿ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಅಂತ ಸೂಚನೆ ನೀಡಿದ್ದರು, ಕೂಡಲೇ ಎಚ್ಚೆತ್ತು ಕೊಂಡ ಪೋಲಿಸರು ತಮ್ಮದೇ ಇಲಾಖೆಯ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದವರನ್ನು ಹೆಡೆ ಮುರಿಕಟ್ಟುವಲ್ಲಿ ಯಶಸ್ವಿಯಾಗಿದೆ.

BIG NEWS: ಇಂದು ಅಯೋಧ್ಯೆಯ ಚೌಕ್‌ಗೆ ಖ್ಯಾತ ಗಾಯಕಿ ʻಲತಾ ಮಂಗೇಶ್ಕರ್ʼ ಹೆಸರು ನಾಮಕರಣ, 40 ಅಡಿ ಉದ್ದದ ʻವೀಣೆʼ ಉದ್ಘಾಟನೆ

BIG NEWS: ದೇಶದಲ್ಲಿ PFI ನಿಷೇಧ ಅತ್ಯಂತ ಸಮರ್ಥ ನಿರ್ಧಾರ;ನಳಿನ್‌ ಕುಮಾರ್‌ ಕಟೀಲ್‌

BIG NEWS: ಚೀನಾ ಗಡಿಯಲ್ಲಿ ರಾಕೆಟ್, ಫಿರಂಗಿ, ನಿಯೋಜಿಸಿದ ಭಾರತ

Share.
Exit mobile version