ಶ್ರೀರಂಗಪಟ್ಟಣದಲ್ಲಿ ಅವಘಡ : ಜೈಂಟ್ ವ್ಹೀಲ್ ಗೆ ತಲೆಕೂದಲು ಸಿಕ್ಕಿ ಬಾಲಕಿಗೆ ಗಂಭೀರ ಗಾಯ

ಮಂಡ್ಯ : ಜೈಂಟ್ ವ್ಹೀಲ್ ಗೆ ಬಾಲಕಿ ತಲೆಕೂದಲು ಸಿಲುಕಿ ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ನಡೆದಿದೆ. ಬೆಂಗಳೂರಿನ ವಿದ್ಯಾಶ್ರೀ (14) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಜಾತ್ರೆಯಲ್ಲಿ ಹಾಕಲಾಗಿದ್ದ ಜೈಂಟ್ ವ್ಹೀಲ್ ಗೆ ಬಾಲಕಿಯ ಕೂದಲು ಆಕಸ್ಮಿಕವಾಗಿ ಸಿಲುಕಿಕೊಂಡಿದೆ. ಪರಿಣಾಮ ಬಾಲಕಿಯ ಕೂದಲು ಸಂಪೂರ್ಣವಾಗಿ ಕಿತ್ತುಬಂದಿದ್ದು, ಬಾಲಕಿ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ಸದ್ಯ. ವಿದ್ಯಾಶ್ರೀಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಜೈಂಟ್ ವ್ಹೀಲ್ ಆಯೋಜಿಸಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. … Continue reading ಶ್ರೀರಂಗಪಟ್ಟಣದಲ್ಲಿ ಅವಘಡ : ಜೈಂಟ್ ವ್ಹೀಲ್ ಗೆ ತಲೆಕೂದಲು ಸಿಕ್ಕಿ ಬಾಲಕಿಗೆ ಗಂಭೀರ ಗಾಯ