ಮಂಡ್ಯ : ಜೈಂಟ್ ವ್ಹೀಲ್ ಗೆ ಬಾಲಕಿ ತಲೆಕೂದಲು ಸಿಲುಕಿ ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ನಡೆದಿದೆ.
ಬೆಂಗಳೂರಿನ ವಿದ್ಯಾಶ್ರೀ (14) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಜಾತ್ರೆಯಲ್ಲಿ ಹಾಕಲಾಗಿದ್ದ ಜೈಂಟ್ ವ್ಹೀಲ್ ಗೆ ಬಾಲಕಿಯ ಕೂದಲು ಆಕಸ್ಮಿಕವಾಗಿ ಸಿಲುಕಿಕೊಂಡಿದೆ. ಪರಿಣಾಮ ಬಾಲಕಿಯ ಕೂದಲು ಸಂಪೂರ್ಣವಾಗಿ ಕಿತ್ತುಬಂದಿದ್ದು, ಬಾಲಕಿ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ.
ಸದ್ಯ. ವಿದ್ಯಾಶ್ರೀಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಜೈಂಟ್ ವ್ಹೀಲ್ ಆಯೋಜಿಸಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
BIGG NEWS : ನಟ ಡಾ.ವಿಷ್ಣುವರ್ಧನ್ ಗೆ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡುವಂತೆ ಅಭಿಮಾನಿಗಳ ಆಗ್ರಹ