ಬೆಂಗಳೂರು: ಶಾಸಕ ಜಮೀರ್‌ ಅಹಮದ್‌ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀರ್ ಅಹಮದ್ ಅವರ ಆದಾಯ ಎಷ್ಟು.? ಅವರ ಒಟ್ಟು ಆಸ್ತಿ ಎಷ್ಟು.? ಅವರ ಒಟ್ಟು ವೆಚ್ಚ ಎಷ್ಟು.? ಗೊತ್ತಾ ವಿವರ ಇಲ್ಲಿದೆ. ಎಫ್ಐಆರ್ ನಲ್ಲಿ ಎಸಿಬಿ ದಾಖಲಿಸಿರುವ ಪ್ರಮುಖ ಅಂಶಗಳು ಏನು.?.

BREAKING NEWS: ಹಾಸನದಲ್ಲಿ ಭೀಕರ ರಸ್ತೆ ಅಪಘಾತ; ಎಲೆಕ್ಟ್ರಿಕ್‌ ಬೈಕ್‌ ಗೆ ಲಾರಿ ಗುದ್ದಿ ಸ್ಥಳದಲ್ಲೇ ತಾಯಿ-ಮಗ ದುರ್ಮರಣ|Accident

 

ಜಮೀರ್ ಅಹಮದ್ ಮೇಲೆ ದಾಖಲಾದ ಎಫ್ಐಆರ್ ಪ್ರತಿ ಇಲ್ಲಿದೆ. ಮಾಜಿ ಸಚಿವ ಜಮೀರ್ ಅಹಮದ್ ಮೇಲೆ ಎಸಿಬಿ ಎಫ್ಐಆರ್ ದಾಖಲಿಸಿದ್ದಾರೆ.
ಜಮೀರ್ ಅಹಮದ್ ವಿರುದ್ಧ ಎಸಿಬಿ ಡಿವೈಎಸ್ ಪಿ ಬಸವರಾಜ ಮಗದುಮ್ ದೂರು ದಾಖಲಿಸಿದ್ದಾರೆ. ಬಸವರಾಜ ಮಗದುಮ್ ದೂರಿನ ಮೇರೆಗೆ ಎಸಿಬಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಕಲಂ 13(1)(b)r/w13(2) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

BREAKING NEWS: ಹಾಸನದಲ್ಲಿ ಭೀಕರ ರಸ್ತೆ ಅಪಘಾತ; ಎಲೆಕ್ಟ್ರಿಕ್‌ ಬೈಕ್‌ ಗೆ ಲಾರಿ ಗುದ್ದಿ ಸ್ಥಳದಲ್ಲೇ ತಾಯಿ-ಮಗ ದುರ್ಮರಣ|Accident

 

ಮೇ 5 ರಂದೇ ಎಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ಪಿಎಂಎಲ್ಎ ಕಾಯ್ದೆ ಅನ್ವಯ ಇಡಿ ಕೊಟ್ಟ ಮಾಹಿತಿ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ಇಡಿ ದಾಖಲಿಸಿದ ಇಸಿಐಆರ್ ತನಿಖೆಯಲ್ಲಿ ಜಮೀರ್ ಅಹಮದ್ ಸಾರ್ವಜನಿಕ ಸೇವಕರಾಗಿದ್ದು, 2005 ರಿಂದ ಆಗಸ್ಟ್ 5, 2021 ರ ಅವದಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಅಪಾರ ಪ್ರಮಾಣದ ಆಸ್ತಿ ಗಳಿಸಿದ್ದಾರೆ.

ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿಯ ದಾಖಲೆ ಪ್ರಕಾರ

ಒಟ್ಟು ಆಸ್ತಿ-73,94,36,027,

ಆದಾಯ-4,30,48,790

ವೆಚ್ಚ-17,80,18,000

ಆದಾಯಕ್ಕಿಂತ 87,44,05,057 ರೂ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಳಿಸಲಾಗಿದೆ. ಅಧಿಕವಾಗಿ ಅಕ್ರಮವಾಗಿ ಆಸ್ತಿ ಗಳಿಸಿದ ಆರೋಪ ಎಸಗಿರಿವುದು ಕಂಡು ಬಂದಿದ್ದು,ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ಎಸಿಬಿ ಡಿವೈಎಸ್ ಪಿ ಕೆ. ರವಿಶಂಕರ್ ಅವರಿಂದ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ದೂರುದಾರ ಬಸವರಾಜ ಮಗದುಮ್ ಕೊಟ್ಟ ವರದಿ ಸಲ್ಲಿಸಿದ್ದಾರೆ.
ಇಡಿ ಅಧಿಕಾರಿಗಳು ನೀಡಿದ ಮಾಹಿತಿ ವರದಿ.ಇಡಿಯವರು ಎಸಿಬಿ ಎಡಿಜಿಪಿಗೆ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ. ಎಸಿಬಿ ಎಸ್ಪಿ ಯವರು ನೀಡಿದ ಪತ್ರಗಳನ್ನ ಲಗತ್ತಿಸಿ ಅಧಿಕಾರಿಗಳು ಇದೀಗ ತನಿಖೆ ಕೈಗೊಂಡಿದ್ದಾರೆ.

 

 

 

Share.
Exit mobile version