BREAKING: ಗಣೇಶ ಮೆರವಣಿಗೆ ವೇಳೆ ಘೋರ ದುರಂತ: ಪಟಾಕಿ ಬಾಕ್ಸ್ ಸ್ಪೋಟಗೊಂಡು ಓರ್ವ ದುರ್ಮರಣ, ಐವರಿಗೆ ಗಾಯ

ಬೆಂಗಳೂರು ಗ್ರಾಮಾಂತರ: ಪಟಾಕಿ ಬಾಕ್ಸ್ ಸ್ಪೋಟಗೊಂಡ ಪರಿಣಾಮ ಓರ್ವ ಬಾಲಕ ದುರ್ಮರಣ, ಪೊಲೀಸ್ ಕಾನ್ಸ್ ಸ್ಟೇಬಲ್ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ಮುತ್ತೋರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಮುತ್ತೂರಿನಲ್ಲಿ ಇಂದು ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಪಟಾಕಿ ಬಾಕ್ಸ್ ಸ್ಪೋಟಗೊಂಡ ಪರಿಣಾಮ ಮುತ್ತೂರು ನಿವಾಸಿ ತನುಷ್ ರಾವ್ (15) ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಫ್ರೆಂಡ್ಸ್ ಯುವಕರ ಬಳಗದಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಲಾಗುತ್ತಿತ್ತು. … Continue reading BREAKING: ಗಣೇಶ ಮೆರವಣಿಗೆ ವೇಳೆ ಘೋರ ದುರಂತ: ಪಟಾಕಿ ಬಾಕ್ಸ್ ಸ್ಪೋಟಗೊಂಡು ಓರ್ವ ದುರ್ಮರಣ, ಐವರಿಗೆ ಗಾಯ