ಕೋಲಾರ: ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಮಹಿಳೆಯ ಬುರ್ಕಾ ಸಿಲುಕಿಕೊಂಡು ಸಾವನ್ನಪ್ಪಿರುವ ವಿಚಿತ್ರ ದುರಂತ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ
BIGG BREAKING NEWS : ಭಾರತ ಸೇರಿ ಹಲವು ದೇಶಗಳಲ್ಲಿ Instagram, Facebook ಸರ್ವರ್ ಡೌನ್, ಬಳಕೆದಾರರ ಪರದಾಟ
ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ಸನ್ ಪೇಟೆಯ 3ನೇ ಅಡ್ಡ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿದ್ದು, ಕೌಸರ್ ಬೇಗ್(37) ಮೃತ ಮಹಿಳೆ. ಕೌಸರ್ ಬೇಗ್ ಮಂಗಳವಾರ ಮುಂಜಾನೆ ತಮ್ಮದೆ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿಗೆ ಬಂದಿದ್ದಳು.
BIGG BREAKING NEWS : ಭಾರತ ಸೇರಿ ಹಲವು ದೇಶಗಳಲ್ಲಿ Instagram, Facebook ಸರ್ವರ್ ಡೌನ್, ಬಳಕೆದಾರರ ಪರದಾಟ
ಈ ವೇಳೆ ಕೌಸರ್ ಬೇಗ್ ಧರಿಸಿದ್ದ ಬುರ್ಕಾ, ಕಬ್ಬಿನ ಯಂತ್ರಕ್ಕೆ ಸಿಲುಕಿದ್ದು, ಅದನ್ನು ತೆಗೆಯಲಾಗದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬುರ್ಕಾದೊಂದಿಗೆ ದೇಹವನ್ನು ಕೂಡ ಯಂತ್ರ ಎಳೆದುಕೊಂಡಿದ್ದರಿಂದ ಮಹಿಳೆಯ ಪ್ರಾಣವೇ ಹೋಗಿದೆ. ಸ್ಥಳಕ್ಕೆ ರಾಬರ್ಟ್ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.