BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ: ವೈದ್ಯಕೀಯ ಶಿಕ್ಷಣದ (MBBS) ಕನಸು ಹೊತ್ತಿದ್ದ ನೀಟ್ ಆಕಾಂಕ್ಷಿ, ಯುವತಿಯೊಬ್ಬಳು ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಕಲಬುರಗಿ ನಗರದ ಕೋರ್ಟ್ ವೃತ್ತದ ಬಳಿ ನಡೆದಿದೆ. ಕಲಬುರಗಿಯ ನಿವಾಸಿ ರಾಜಶೇಖರ್ ಎಂಬುವವರ ಪುತ್ರಿ ಭಾಗ್ಯಶ್ರೀ (18) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೇ 2ರಂದು ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (NEET) ಬರೆದಿದ್ದ ಭಾಗ್ಯಶ್ರೀ, ವೈದ್ಯಕೀಯ ಶಿಕ್ಷಣದ ಸೀಟು ಸಿಗುವ ಬಗ್ಗೆ ಬಹಳ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದಳು ಎನ್ನಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಶೇ.92 … Continue reading BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ