ಗುಂಟೂರು (ಆಂಧ್ರ ಪ್ರದೇಶ): ಕೃಷ್ಣಾ ಜಿಲ್ಲೆ ಜಗ್ಗಯ್ಯಪೇಟೆ ಮಂಡಲದ ಚಿಲಕಲ್ಲು ಎಂಬಲ್ಲಿ ಗುಂಟೂರು ಜಿಲ್ಲೆಯ ಮಂಗಳಗಿರಿ ಮೂಲದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತಳನ್ನು ಶ್ವೇತಾ ಚೌಧರಿ ಎಂದು ಗುರುತಿಸಲಾಗಿದ್ದು, ಈಕೆ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ಶನಿವಾರ ಸಂಜೆ ಮನೆಯಿಂದ ಹೊರಬಂದ ಶ್ವೇತಾ ಚಿಲ್ಲಕಲ್ಲು ತಲುಪಿ ಸಮೀಪದ ಕೆರೆಗೆ ಹಾರಿ ಸಾವಿಗೆ ಶರಣಾಗಿದ್ದಾರೆ.

ಹೈದರಾಬಾದ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶ್ವೇತಾ ಕಳೆದ ಮೂರು ತಿಂಗಳಿಂದ ಮಂಗಳಗಿರಿಯಲ್ಲಿದ್ದು ಮನೆಯಿಂದಲೇ ಕೆಲಸ(Work from home) ಮಾಡುತ್ತಿದ್ದಾರೆ. ಭಾನುವಾರ(ಇಂದು) ಸಂಜೆ ಮಂಗಳಗಿರಿಯಿಂದ ಪೋಷಕರೊಂದಿಗೆ ಹೈದರಾಬಾದ್‌ಗೆ ಹೋಗಲು ಸಿದ್ಧವಾಗಿದ್ದಳು. ಆದ್ರೆ, ಶನಿವಾರ ಸಂಜೆ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ಶ್ವೇತಾ ರಾತ್ರಿ 8 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೋಷಕರಿಗೆ ಸಂದೇಶ ರವಾನಿಸಿದ್ದಾಳೆ.

ಇದರಿಂದ ಗಾಬರಿಗೊಂಡ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತ್ರ ಜಾವ ಚಿಲ್ಲಕಲ್ಲು ಗ್ರಾಮಕ್ಕೆ ತೆರಳಿ ಕೆರೆಯಲ್ಲಿ ಹುಡುಕಾಟ ಪ್ರಾರಂಭಿಸಿದಾಗ ಶ್ವೇತಾ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈಕೆಯ ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ.

ನನಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ, ಪಕ್ಷ ಇದ್ದರೆ ಮಾತ್ರ ನಾವು – ಡಿ.ಕೆ ಶಿವಕುಮಾರ್

ಇಂದು ಇಂಡಿಗೋ ವಿಮಾನಗಳಲ್ಲಿ ಭಾರೀ ವಿಳಂಬ: ಕಾರಣ ತಿಳಿಸುವಂತೆ ವಿಮಾನಯಾನ ಸಂಸ್ಥೆಗೆ ಸೂಚನೆ

Share.
Exit mobile version