ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ಸಿನೆಮಾಗಳು ಅಂದ್ರೆ ಅಲ್ಲೊಂದು ಕ್ರೇಜ್ ಜೊತೆ, ಸಾಕಷ್ಟು ನಿರೀಕ್ಷೆಗಳು ಸಿನಿಪ್ರಿಯರಲ್ಲಿ ಹುಟ್ಟೋದು ಸಹಜ. ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನ ನೀಡ್ತಿರುವ ಸಿಂಪಲ್ ಸುನಿ ಈಗ್ಯಾವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗ್ತಿದ್ದಾರೆ ಅಂತ ಕಾದು ಕುಳಿತಿದ್ದ ಅಭಿಮಾನಿಗಳಿಗೆ ‘ಒಂದು ಸರಳ ಪ್ರೇಮಕಥೆ’ ಮೂಲಕ ಗುಡ್ ನ್ಯೂಸ್ ಕೊಟ್ಟಿರೋದು ಗೊತ್ತಿರೋ ವಿಚಾರ.
ಎಸ್ ಈಗ ಈ ವಿಚಾರ ಯಾಕಪ್ಪಾ ಏನಾದ್ರೂ ಹೊಸ ಅಪ್ಡೇಟ್ ಇದ್ಯಾ? ಅಂತ ನೀವ್ ಕೇಳಿದ್ರೆ ಸಿಂಪಲ್ ಸುನಿ ಅವರ ಟ್ವೀಟ್ಟೇ ಅದಕ್ಕೆ ಉತ್ತರ. ಎಸ್ ಒಂದು ಸರಳ ಪ್ರೇಮ ಕಥೆ ಚಿತ್ರದ ಮೊದಲ ಪೋಸ್ಟರ್ ಅನ್ನು ಸುನಿ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಸಿಂಪಲ್ಲಾಗ್ ಒಂದ್ Lovestory ದಶಕದ ಸವಿ ನೆನಪಿನಲ್ಲಿ.. ನನ್ನ ಮುಂದಿನ ಚಿತ್ರ “ಒಂದು ಸರಳ ಪ್ರೇಮ ಕಥೆ ” ಚಿತ್ರದ ಮೊದಲ ಭಿತ್ತಿಚಿತ್ರವನ್ನು ಅನಾವರಣ ಗೊಳಿಸುತ್ತಿದ್ದೇವೆ… ಇಚ್ಚಿಸಿ ಹಂಚಿ ಹಂಚಿಸಿ ಹಾರೈಸಿ” ಎಂದು ಪೋಸ್ಟರ್ ನೊಂದಿಗೆ ಬರೆದುಕೊಂಡಿದ್ದಾರೆ.
ಸಖತ್ ಸಕ್ಸಸ್ ಕಂಡಿದ್ದ ಸಿಂಪಲ್ಲಾಗ್ ಒಂದ್ Lovestory ದಶಕದ ಸವಿ ನೆನಪಿನಲ್ಲಿ ಸುನಿ ಅವರ ಮತ್ತೊಂದು ಚಿತ್ರ ಒಂದು ಸರಳ ಪ್ರೇಮ ಕಥೆಯ ಪೊಸ್ಟರ್ ಹೊರಬಿದ್ದಿದೆ. ಟೈಟಲ್ ಕೇಳಿಯೇ ಥ್ರಿಲ್ ಆಗಿದ್ದ ಸಿನಿರಸಿಕರಿಗೆ ಪೋಸ್ಟರ್ ನೋಡಿದ ಮೇಲೆ ಇಲ್ಲೇನೋ ಇಂಟ್ರಸ್ಟಿಂಗ್ ಕಹಾನಿ ಇರೋದು ಖಾತ್ರಿಯಾದಂತಿದೆ.
ಇನ್ನು ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ‘ಒಂದು ಸರಳ ಪ್ರೇಮಕಥೆ’ ಚಿತ್ರ ನಿರ್ದೇಶಕ ಸಿಂಪಲ್ ಸುನಿ, ವಿನಯ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರೋ ಚೊಚ್ಚಲ ಕಥೆಗೆ ನಾಯಕಿಯಾಗಿ ಕಾಲಿವುಡ್ ಬೆಡಗಿ ಸ್ವತಿಷ್ಠ ಕೃಷ್ಣನ್ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಚಿತ್ರಕ್ಕಾಗಿ ನಾಯಕಿ ಹುಡುಕಾಟದಲ್ಲಿದ್ದ ಸಿಂಪಲ್ ಸುನಿ ಈ ಮೂಲಕ ಧಾರವಾಡ ಮೂಲದ ಕನ್ನಡತಿ,ಕಮಲ್ ಹಾಸನ್ ನಟನೆಯ ತಮಿಳಿನ ‘ವಿಕ್ರಮ್’ ಚಿತ್ರದಲ್ಲಿ ನಟಿಸಿರುವ ನಟಿ ಸ್ವತಿಷ್ಠ ಕೃಷ್ಣನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದ್ದಾರೆ.
ಇನ್ನುಳಿದಂತೆ ಚಿತ್ರಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡುತ್ತಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನ, ಸಭಾ ಕುಮಾರ್- ಕಾರ್ತಿಕ್ ಶರ್ಮಾ ಛಾಯಾಗ್ರಾಹಣ , ಆದಿ ಸಂಕಲನ,ಪ್ರಸನ್ನ ಕಥೆ-ಚಿತ್ರಕಥೆ, ರಚನ ವಚನ ನಿರ್ದೇಶನದ ಹೊಣೆ ಸಿಂಪಲ್ ಸುನಿ ವಹಿಸಿಕೊಂಡಿದ್ದಾರೆ.
ಸಿಂಪಲ್ಲಾಗ್ ಒಂದ್ Lovestory ದಶಕದ ಸವಿ ನೆನಪಿನಲ್ಲಿ.. ನನ್ನ ಮುಂದಿನ ಚಿತ್ರ "ಒಂದು ಸರಳ ಪ್ರೇಮ ಕಥೆ " ಚಿತ್ರದ ಮೊದಲ ಭಿತ್ತಿಚಿತ್ರವನ್ನು ಅನಾವರಣ ಗೊಳಿಸುತ್ತಿದ್ದೇವೆ… ಇಚ್ಚಿಸಿ ಹಂಚಿ ಹಂಚಿಸಿ ಹಾರೈಸಿ@vinayrajkumar @swathishta #rammovies #malikasingh #sabha #karthik #veersamarth #ramesh pic.twitter.com/2nGqLoCWoy
— ಸುನಿ/SuNi (@SimpleSuni) March 8, 2023