ಅಪರೂಪದ ಘಟನೆ ; ಏಳು ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ರೂ ಮುದ್ದಾದ ‘ಮಗು’ವಿಗೆ ಜನ್ಮ ನೀಡಿದ ಮಹಿಳೆ

ದೆಹಲಿ : ಅಪಘಾತದಲ್ಲಿ ಗಾಯಗೊಂಡು ಕಳೆದ ಏಳು ತಿಂಗಳುಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಹಿಳೆಯೊಬ್ಬಳು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಅಪರೂಪದ ಘಟನೆ ದೆಹಲಿಯ ಏಮ್ಸ್’ನಲ್ಲಿ ನಡೆದಿದೆ. ಅಂದ್ಹಾಗೆ, ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಮಹಿಳೆಯೊಬ್ಬರು ಈ ವರ್ಷ ಮಾರ್ಚ್ 31ರಂದು ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಅಪಘಾತಕ್ಕೊಳಗಾಗಿದ್ದರು. ಆ ವೇಳೆ ಹೆಲ್ಮೆಟ್ ಧರಿಸದೇ ಇದ್ದ ಕಾರಣ ಆಕೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಈ ಕಾರಣದಿಂದಾಗಿ, ಆಕೆ ಹಲವಾರು ತಲೆಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪ್ರಾಣಪಾಯದಿಂದ ಪಾರಾದ್ರೂ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ಈ ಮಹಿಳೆ ಕಣ್ಣು … Continue reading ಅಪರೂಪದ ಘಟನೆ ; ಏಳು ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ರೂ ಮುದ್ದಾದ ‘ಮಗು’ವಿಗೆ ಜನ್ಮ ನೀಡಿದ ಮಹಿಳೆ