ಪೆರು: ಪೆರುವಿನ ಜಾರ್ಜ್ ಚಾವೆಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಟೇಕಾಫ್ ಆಗುತ್ತಿದ್ದಾಗ ಲಾಟಮ್ ಏರ್ ಲೈನ್ಸ್ ವಿಮಾನವು ಅಗ್ನಿಶಾಮಕ ಎಂಜಿನ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಅಗ್ನಿಶಾಮಕ ದಳದವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ವಿಮಾನದಲ್ಲಿದ್ದ 102 ಪ್ರಯಾಣಿಕರು ಮತ್ತು 6 ಸಿಬ್ಬಂದಿ (ಪೈಲಟ್ ಸೇರಿದಂತೆ) ಸುರಕ್ಷಿತವಾಗಿರುವುದು ಸಮಾಧಾನದ ವಿಷಯವಾಗಿದೆ. ಈ ಘಟನೆಯ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಮಾಹಿತಿಯ ಪ್ರಕಾರ, ಪೆರುವಿನ ಜಾರ್ಜ್ ಚಾವೆಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. 102 ಪ್ರಯಾಣಿಕರು ಮತ್ತು 6 ಸಿಬ್ಬಂದಿಯೊಂದಿಗೆ ಟೇಕಾಫ್ ಆಗಲು ಲ್ಯಾಟಮ್ ಏರ್ ಲೈನ್ಸ್ ವಿಮಾನವು ರನ್ ವೇಯಲ್ಲಿ ಚಲಿಸುತ್ತಿತ್ತು. ಏತನ್ಮಧ್ಯೆ, ಟ್ರಕ್ ವಿಮಾನದ ಮುಂದೆ ಬಂದಿತು. ಡಿಕ್ಕಿಯ ನಂತರ, ಟ್ರಕ್ ಗೆ ಬೆಂಕಿ ತಗುಲಿತು ಮತ್ತು ಟ್ರಕ್ ನಲ್ಲಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಅಂತ ವರದಿ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದ ಪ್ರಕಾರ, ಜೆಟ್ಲೈನರ್ ರನ್ವೇಯಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ. ಈ ಘಟನೆಯ ನಂತರ ವಿಮಾನ ನಿಲ್ದಾಣವು ರನ್ವೇಯಲ್ಲಿನ ಎಲ್ಲಾ ವಿಮಾನಗಳ ಟೇಕ್-ಆಫ್ ಅನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿತು. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

https://twitter.com/NoticiasMundo23/status/1593710465691033602

Share.
Exit mobile version