ಕೆಎನ್ ಎನ್ ಸಿನಿಮಾ ಡೆಸ್ಕ್ : ಪ್ರತಿಭೆ,ಕಲೆ ಯಾರ ಮನೆಯ ಸ್ವತ್ತಲ್ಲ. ಯಾರು ಶ್ರದ್ರೆ,ಪರಿಶ್ರಮದಿಂದ ಕಲಾದೇವಿಯನ್ನ ಆರಾಧಿಸುತ್ತಾರೋ ಅವರಿಗೆ ಕಲಾದೇವಿ ಒಲಿಯುತ್ತಾಳೆ. ಅದಕ್ಕೆ ಬಡವ, ಶ್ರೀಮಂತ ಮತ್ಯಾವುದು ವಿಷಯವಾಗಲ್ಲ. ಹೀಗೆ ಕಲಾ ದೇವಿಯ ಆರಾದಕನಾಗಿ ರಾಮ ರಾಮ ರೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ಧರ್ಮಣ್ಣ ಕಡೂರು. ಹಾಸ್ಯನಟನಾಗಿ ಚಿರಪರಿಚಿತರಾಗಿರೋ ಧರ್ಮಣ್ಣ ತಮಗೆ ಸಿಕ್ಕ ಪಾತ್ರಗಳೆಲ್ಲಕ್ಕೂ ಜೀವ ಕಳೆ ತುಂಬುವ ಕಾರ್ಯದಲ್ಲಷ್ಟೇ ನಿರತರಾಗಿದ್ದರು. ಆ ಶ್ರದ್ದೆಗೆ ಈಗ ಹೊಸ ಆಯಾಮದ ಪ್ರತಿಫಲ ದೊರಕಿದೆ. ಹೌದು ಧರ್ಮಣ್ಣ ರಾಜಯೋಗ ಚಿತ್ರದ ಮೂಲಕ ಹಾಸ್ಯ ನಟ,ಸಹ ಕಲಾವಿದನ ಪಟ್ಟದೊಂದಿಗೆ ನಾಯಕ ನಟನಾಗಿ ಭಡ್ತಿ ಪಡೆಯುತ್ತಿದ್ದಾರೆ.
ಕಡು ಬಡತನ,ರೈತಾಪಿ ಕುಟುಂಬ, ಮುಗ್ದ ಮನಸಿನ ಈ ಕಲಾವಿದನ ಜಾಣ್ಮೆ,ಪರಿಶ್ರಮಕ್ಕೆ ಈಗ ಹೊಸ ಮಗ್ಗಲು ದೊರಕಿದಂತಾಗಿದೆ. ತಮ್ಮ ಕೆಲಸದಲ್ಲಿ ಪರಿಪೂರ್ಣತೆಯ ಶ್ತಮವೊಂದಿದ್ದರೆ ಚಿತ್ರರಂಗದಲ್ಲಿನ ಪುಟ್ಟ ಹೆಜ್ಜೆಯೂ ರಾಜಮಾರ್ಗವಾಗಿ ಬದಲಾಗಿ ಬಿಡುತ್ತೆ ಎಂಬುದಕಗಕೆ ಈಗಾಗಲೇ ಸಾಕಷ್ಟು ನಟ ನಟಿಯರ ಉದಾಹರಣೆಗಳಿವೆ. ಆ ಸಾಲಿಗೀಗ ‘ರಾಜಯೋಗ’ದ ಬಂಪರ್ ಲಾಟರಿ ಮೂಲಕ ಧರ್ಮಣ್ಣ ಕಡೂರು ಸಹ ಸೇರಲಿದ್ದಾರೆ. ರಾಮ ರಾಮ ರೇ ಚಿತ್ರದಲ್ಲಿನ ವಿಭಿನ್ನ ಹಾಗು ಮನೋಜ್ಞ ಅಭಿನಯಕ್ಕೆ ಫಿದಾ ಆಗಿದ್ದವರು ಈ ಪ್ರತಿಭೆಗೆ ಶಬ್ಬಾಶ್ ಎಂದಿದ್ದರು.ಆನಂತರ ಒಂದಾದ ಮೇಲೊಂದು ಕಾಮಿಡಿ ಪಾತ್ರಗಳು ಇವರನ್ನ ಅರಸಿ ಬರತೊಡಗಿದ್ವು. ಬಂದ ಪಾತ್ರಗಳೆಲ್ಲವನ್ನು ಕಣ್ಣಿಗೊತ್ತಿಕೊಂಡು ನಟಿಸಿದ್ದರು.
ಸಧ್ಯ ಹೀಗೆ ಹಾಸ್ಯನಟನಾಗಿ ಬ್ಯುಸಿಯಿರುವಾಗಲೇ ಧರ್ಮಣ್ಣ `ರಾಜಯೋಗ’ ಅಂತೊಂದು ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಅಂದಹಾಗೆ ಈ ರಾಜಯೋಗ ತನ್ನಂತಾನೆ ಧರ್ಮಣ್ಣ ರನ್ನ ಅರಸಿ ಬಂದ ಯೋಗ. ಈ ಯೋಗ,ಕನಸು,ಆಸೆಗಳೆಲ್ಲವೂ ಸಾರ್ಥಕ್ಯ ಗೊಳ್ಳಲು ಕಾರಣ ಅವರ ಪರಿಶ್ರಮ ಮತ್ತು ನಟನೆಯೇ ಹೊರತು ಬೇರೇನಲ್ಲ. ಈಗಾಗಲೇ ಕಿರುತೆರೆಯಲ್ಲಿ ಒಂದಷ್ಟು ವರ್ಷಗಳಿಂದ ಪಳಗಿಕೊಂಡಿರುವ ಲಿಂಗರಾಜ ಉಚ್ಚಂಗಿ ದುರ್ಗ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ರಾಜಯೋಗ ಚಿತ್ರ ಕಾಮಿಡಿ ಮತ್ತು ಎಮೋಷನಲ್ ಅಂಶಗಳನ್ನು ಒಳಗೊಂಡ ಜಾನರಿನದ್ದು. ಶ್ರೀರಾಮನಾಥನ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಸ್ನೇಹಿತರು ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಸುಮಾರು ಎಪ್ಪತ್ತು ಭಾಗದಷ್ಟು ಚಿತ್ರೀಕರಣ ಮುಗಿಸಿಕೊಂಡಿರುವ ರಾಜಯೋಗದಿಂದ ಇಂಟ್ರಸ್ಟಿಂಗ್ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಲಾಗಿದೆ. ಪೋಸ್ಟರ್ ನಲ್ಲೇ ಒಂದಷ್ಟು ಸಾರತೆ ಮತ್ತು ಪಾತ್ರದ ಬಗ್ಗೆ ಕುತೂಹಲ ಹುಟ್ಟು ಹಾಕ್ತಿದ್ದು,ಪ್ಯಾಮಿಲಿ ಸೆಂಟಿಮೆಂಟ್ ಇರಲಿದೆಯೇನೋ ಅನಿಸೋದ್ರ ಜೊತೆಗೆ ಸಿನಿಪ್ರಿಯರಿಗೆ ರಾಜಯೋಗ ಸಿನೆಮಾ ಹತ್ತಿರವಾಗುವ ಲಕ್ಷಣಗಳೇ ಎದ್ದು ಕಾಣ್ತಿವೆ.
ಅ್ಯನಿ ವೇ ಇಷ್ಟು ದಿನ ಕಾಮಿಡಿ ಪಾತ್ರಗಳ ಮೂಲಕ ಮನಸ್ಸಿಗೆ ಹತ್ತಿರವಾಗಿದ್ದ ಧರ್ಮಣ್ಣ,ಈಗ ರಾಜಯೋಗದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರಾಜ ಯೋಗ ಸಿನೆಮಾ ಈ ಪ್ರತಿಭಾವಂತನ ಹೊಸ ಆಯಾಮದ ಯೋಗವಾಗೋ ಮೂಲಕ ಚಿತ್ರರಂಗದಲ್ಲಿ ನಾಯಕನಾಗಿ ಧರ್ಮಣ್ಣ ಛಾಪು ಮೂಡಿಸಲೆಂಬುದೇ ನಮ್ಮ ಆಶಯ.